ಕಳವು ಪ್ರಕರಣದ ಆರೋಪಿತೆಯ ಬಂಧನ ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶ
- ದಿನಾಂಕ 13/01/2012 ರಂದು ಯಾರೋ ಕಳ್ಳರು ಗಂಗೊಳ್ಳಿ ಠಾಣಾ ಸರಹದ್ದಿನ ಗುಜ್ಜಾಡಿ ಗ್ರಾಮದ ಶ್ರೀರಾಮ ಮಂದಿರದ ಬಳಿ ಇರುವ ಕಂಚುಗೋಡು ಎಂಬಲ್ಲಿನ ಶ್ರೀ ನಾರಾಯಣ ಪೂಜಾರಿಯವರ ಮನೆಯ ಬಾಗಿಲು ತೆರೆದು ಒಳ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು 1,50,000/ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆಪಾದಿತೆ ಶ್ರೀಮತಿ ಲಕ್ಷ್ಮೀ ಗುಜ್ಜಾಡಿ ಎಂಬವಳನ್ನು ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ವೈ ಎಸ್ ರವಿ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ವೆಂಕಟೇಶಪ್ಪ ರವರ ಮಾರ್ಗದರ್ಶನದಲ್ಲಿ, ಕುಂದಾಪುರ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ರಾಮ್ ನಿವಾಸ್ ಸೆಪಾಟ್ ರವರ ನಿರ್ದೇಶನದಂತೆ ಕುಂದಾಪುರ ಪೊಲೀಸ್ ವೃತ್ತದ ಪ್ರಭಾರದಲ್ಲಿದ್ದ ಬೈಂದೂರು ವೃತ್ತ ನಿರೀಕ್ಷಕರಾದ ಶ್ರೀ ಅರುಣ್ ಬಿ. ನಾಯಕ್ ರವರ ತಂಡ ಬಂಧಿಸಿ ಅಪಾದಿತಳಿಂದ ರೂ 1,50,000/- ಮೌಲ್ಯದ ಕಳವಾದ ಎಲ್ಲಾ ಚಿನ್ನಾಭರಣಗಳನ್ನು ಸ್ವಾಧೀನಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಅಪರಾಧ ವಿಭಾಗದ ಪಿ.ಎಸ್.ಐ. ಸಿ.ಎಂ.ತಿಮ್ಮ ಶೆಟ್ಟಿ, ಗಂಗೊಳ್ಳಿ ಪಿ.ಎಸ್.ಐ. ಗೋಪಾಲ ನಾಯ್ಕ, ಸಿಬ್ಬಂದಿಯವರಾದ ವೆಂಕಟ್ರಮಣ ದೇವಾಡಿಗ, ಪ್ರವೀಣ್ ಸುಧಾಕರ, ವಿಜಯ, ಸಂತೋಷ ಮಧುಸೂಧನ ಪ್ರಕಾಶ್ ದೊಂಬಾಳ, ಸೀತಾರಾಮ, ಪದ್ಮಾವತಿ ಚಾಲಕರಾದ ರಾಜೇಶ್ , ಪ್ರಭಾಕರ ಶೆಟ್ಟಿ ಇವರ ಭಾಗವಹಿಸಿರುತ್ತಾರೆ
No comments:
Post a Comment