ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರವಿ ಕುಮಾರ್ ವೈ.ಎಸ್ ಐಪಿಎಸ್, ಇವರು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಙಾಧಿಕಾರಿಯಾಗಿ ಉಡುಪಿ ಜಿಲ್ಲೆಯಿಂದ ವರ್ಗಾವಣೆಗೊಂಡಿರುತ್ತಾರೆ. ಕುಂದಾಪುರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ರಾಮ್ ನಿವಾಸ್ ಸೆಪಟ್ ಐಪಿಎಸ್, ಇವರು ಪದನ್ನೋತಿ ಹೊಂದಿ ಕೋಲಾರ ಜಿಲ್ಲೆಯ ಪೊಲೀಸ್ ವರಿಷ್ಙಾಧಿಕಾರಿಯಾಗಿ ನೇಮಕಗೊಂಡು ವರ್ಗಾವಣೆಗೊಂಡಿರುತ್ತಾರೆ. ಶ್ರೀ ರಾಮ್ ನಿವಾಸ್ ಸೆಪಟ್ ಇವರ ಧರ್ಮಪತ್ನಿ ಶ್ರೀಮತಿ ರೋಹಿಣಿ ಕಟೋಚ್ ಐಪಿಎಸ್ ಇವರು ಕೆಜಿಎಫ್ ಜಿಲ್ಲೆಯ ಪೊಲೀಸ್ ವರಿಷ್ಥಾಧಿಕಾರಿಯಾಗಿ ನೇಮಕಗೊಂಡಿರುತ್ತಾರೆ. ಇವರುಗಳ ಬೀಳ್ಕೊಡುಗೆ ಸಮಾರಂಭವು ದಿನಾಂಕ 26/01/2012 ರಂದು ಸಂಜೆ 5:30 ಗಂಟೆಗೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಶ್ರೀ ಎಂ.ವಿ. ವೆಂಕಟೇಶಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದಲ್ಲಿ ಪೊಲೀಸ್ ಉಪಾಧೀಕ್ಷಕರುಗಳಾದ ಶ್ರೀ ಜಯಂತ್.ವಿ.ಶೆಟ್ಟಿ ಉಡುಪಿ ಉಪ ವಿಭಾಗ ಮತ್ತು ಶ್ರೀ ಸಂತೋಷ ಕುಮಾರ್ ಕಾರ್ಕಳ ಉಪ ವಿಭಾಗ, ಜಿಲ್ಲಾ ಪೊಲೀಸ್ ಕಛೇರಿಯ ಎಎಒ ಶ್ರೀ ಚಂದ್ರಶೇಖರ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು. ಅಲ್ಲದೇ ಜಿಲ್ಲೆಯ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐಯವರುಗಳು ಜಿಲ್ಲಾ ಪೊಲೀಸ್ ಕಛೇರಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
Subscribe to:
Post Comments (Atom)
No comments:
Post a Comment