Saturday, January 28, 2012

Daily Crimes Reported as on 28/01/12 at 17:00 Hrs

ಅಪಘಾತ ಪ್ರಕರಣಗಳು



  • ಕೋಟ: ದಿನಾಂಕ 26/01/2012 ರಂದು ರವಿರಾಜ್ (50) ಬಿನ್ ಬಸವ ಗಾಣಿಗ ವಾಸ:ಮದಗ 52 ಹೇರೂರು ಗ್ರಾಮ ಉಡುಪಿ ತಾಲೂಕು ಎಂಬವರು ಅವರ ತಮ್ಮ ಕೃಷ್ಣ ಗಾಣಿಗರ ಕೆ.ಎ.19 ಪಿ-2408 ನೇ ಮಾರುತಿ 800 ಕಾರಿನಲ್ಲಿ ಅವರ ಸ್ನೇಹಿತ ರಮೇಶ ಎಂಬವರ ಜೊತೆಯಲ್ಲಿ ಸಾಲಿಗ್ರಾಮದಿಂದ ಬ್ರಹ್ಮಾವರ ಕಡೆಗೆ ಹೋಗುವ ಸಮಯ ಸದ್ರಿ ಕಾರನ್ನು ಕೃಷ್ಣ ಗಾಣಿಗರವರು ಚಲಾಯಿಸುತ್ತಿದ್ದು ಸದ್ರಿ ಕಾರು ಗುಂಡ್ಮಿ ಗ್ರಾಮದ ಸಾಸ್ತಾನ ಪೆಟ್ರೋಲ್ ಬಂಕ್ ನ ಸ್ವಲ್ಪ ಮುಂದೆ ಹೋಗುತ್ತಿರುವಾಗ ರಾತ್ರಿ 12:30 ಗಂಟೆಗೆ ಆರೋಪಿ ಕೆ.ಎ.20 ಬಿ-1593 ನೇ ಟೆಂಪೋ ಚಾಲಕನು ತನ್ನ ಟೆಂಪೋವನ್ನು ಉಡುಪಿ ಕಡೆಯಿಂದ ಸಾಲಿಗ್ರಾಮ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಎಡ ಭಾಗದಲ್ಲಿ ಹೋಗುತ್ತಿದ್ದ ರವಿರಾಜ್ ರವರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರುಗಡೆ ಕುಳಿತಿದ್ದ ಅವರ ತಲೆಯ ಬಲ ಭಾಗಕ್ಕೆ ತೀವ್ರ ತರಹದ ರಕ್ತಗಾಯವಾಗಿದ್ದು ಕಾರಿನ ಎದುರು ಭಾಗ ಜಖಂಗೊಂಡಿದ್ದು ಎದುರು ಭಾಗದ ಗ್ಲಾಸ್ ಒಡೆದುಹೋಗಿದ್ದಾಗಿದೆ ಎಂಬುದಾಗಿ ರವಿರಾಜ್ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/12 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಕುಂದಾಪುರ: ದಿನಾಂಕ 28/01/2012 ರಂದು ಸಚಿನ್ ಪೈ (24) ಬಿನ್ ಚಿತ್ರಾನಂದ ಪೈ, ವಾಸ: ಕುದ್ರೆಕೆರೆ ಬೆಟ್ಟು, ಮಾರ್ಕೋಡು, ಕೊಟೇಶ್ವರ ಗ್ರಾಮ ಎಂಬವರು ಹಂಗಳೂರಿನ ಅಮಿತ್ ಗ್ಯಾರೇಜ್ ಬಳಿ ರಾ.ಹೆ 66 ರ ಬದಿಯಲ್ಲಿ ನಿಂತಿರುವಾಗ ಬೆಳಿಗ್ಗೆ 9:20 ಗಂಟೆಗೆ ಅಮಿತ್ ಗ್ಯಾರೇಜ್ ಎದುರುಗಡೆ ಆಪಾದಿತ ರಿಕ್ಷಾ ಚಾಲಕ ವಿಕ್ಟರ್ ಡಿಸೋಜ ಎಂಬವರು KA20-B-5836 ನೇ ರಿಕ್ಷಾವನ್ನು ಏಕಮುಖ ಸಂಚಾರ ರಸ್ತೆಗೆ ವಿರುದ್ಧವಾಗಿ ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಎಕಮುಖ ರಸ್ತೆಯಲ್ಲಿ ಬರುತ್ತಿದ್ದ KA20-B-5836 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ರವಿ ಹಾಗೂ ಸಹ ಸವಾರ ಅರ್ಜುನ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ರವಿ ಎಂಬವರಿಗೆ ಕೈಗೆ, ಕಾಲಿಗೆ ತರಚಿದ ಗಾಯ, ಹಾಗೂ ಅರ್ಜುನ್ ಅವರಿಗೆ ಬಲಕಾಲಿಗನ ಗಂಟಿಗೆ, ತಲೆಗೆ ರಕ್ತಗಾಯವಾಗಿರುವುದಾಗಿದೆ ಹಾಗೂ ಎರಡು ವಾಹನಗಳು ಜಖಂಗೊಂಡಿರುವುದಾಗಿದೆ. ಗಾಯಾಳುಗಳನ್ನು ಗಣೇಶ ಪೈ ಹಾಗೂ ಇತರರು ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ,ಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ ಎಂಬುದಾಗಿ ಸಚಿನ್ ಪೈ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/12 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಕಾಪು: ದಿನಾಂಕ. 28.01.2012 ರಂದು ಬೆಳಿಗ್ಗೆ 6:10 ಗಂಟೆಗೆ ಉದ್ಯಾವರ ಗ್ರಾಮದ ಉದ್ಯಾವರ ಒಳಪೇಟೆ ತಿರುವು ಬಳಿ, ರಾ.ಹೆ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-20-ಬಿ-8990 ನೇ ಲಾರಿ ಚಾಲಕನು ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಲಾರಿಯ ಮುಂದುಗಡೆ ಹೋಗುತ್ತಿದ್ದ ಟೆಂಪೋವೊಂದನ್ನು ಓವರ್ಟೆಕ್ ಮಾಡುವ ಯತ್ನದಲ್ಲಿ ರಸ್ತೆಯ ತೀರ ಬಲಕ್ಕೆ ಬಂದು ಬೆಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕೆಎ-41-4244 ನೇ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂದುಗಡೆ ಕುಳಿತಿದ್ದ ಪಿರ್ಯಾದಿ ಕೆ. ಕೃಷ್ಣ ಆಚಾರ್ಯ (22) ಬಿನ್ ರಾಘವೇಂದ್ರ ಆಚಾರ್ಯ, ವಾಸ:-ಜೆ.ಪಿ ನಗರ, 7ನೇ ಕ್ರಾಸ್, ಪುಟ್ಟೇನಹಳ್ಳಿ, ಬೆಂಗಳೂರು ಎಂಬವರಿಗೆ ಮುಖದ ಭಾಗಕ್ಕೆ ತರಚಿದ ಗಾಯ, ಹೊಟ್ಟೆಗೆ ಗುದ್ದಿದ ನೋವಾಗಿರುತ್ತದೆ ಮತ್ತು ಬಲಕೈ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಕಾರಿನ ಹಿಂಬದಿಯಲ್ಲಿ ಕುಳಿತಿದ್ದವರಲ್ಲಿ ಮುರಳಿ.ಪಿರವರಿಗೆ ತಲೆಯ ಭಾಗಕ್ಕೆ ರಕ್ತಗಾಯ, ಮುಖದ ಭಾಗಕ್ಕೆ ರಕ್ತಗಾಯವಾಗಿರುತ್ತದೆ. ಮುರಳಿ.ಪಿ ರವರ ಪತ್ನಿ ಶಾಮಲರವರಿಗೆ ಮೂಗಿನ ಮೇಲ್ಬಾಗ ರಕ್ತಗಾಯ, ಬಲ ಕಾಲು ತೊಡೆಯಲ್ಲಿ ಮೂಳೆ ಮುರಿತ ಮತ್ತು ಬಲಕೈ ಗುದ್ದಿದ ಗಾಯವಾಗಿರುತ್ತದೆ ಹಾಗೂ ಕಾರಿನ ಚಾಲಕ ವಸೀಮ್ ರವರಿಗೆ ಬಲಕಾಲು ಕೋಲುಕಾಲಿನ ಮೂಳೆಮುರಿತವಾಗಿದ್ದು, ಎಡಹುಬ್ಬಿನ ಮೇಲ್ಬಾಗ, ಕುತ್ತಿಗೆಯ ಬಳಿ ರಕ್ತಗಾಯವಾಗಿರುತ್ತದೆ ಮತ್ತು ಗಲ್ಲದ ಬಳಿಯೂ ರಕ್ತಗಾಯವಾಗಿ ಉಡುಪಿ ಹೈ-ಟೆಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಕೆ. ಕೃಷ್ಣ ಆಚಾರ್ಯ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/12 ಕಲಂ 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು




  • ಕಾರ್ಕಳ: ದಿನಾಂಕ 27.01.2012 ರಂದು ರಾತ್ರಿ 8:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕಂಗಿಮಾರು ಎಂಬಲ್ಲಿ ನಾಗಯ್ಯ ಮಡಿವಾಳ (65) ಬಿನ್ ಚರ್ಬ ಮಡಿವಾಳ. ವಾಸ: ಕಂಗಿಮಾರು ಮನೆ. ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಎಂಬವರ ಮನೆಯ ಬಳಿ ಇರುವ ಬಾವಿಯ ಬಳಿ ಅವರ ಮಗ ಸಂತೋಷ್ ಮಡಿವಾಳ ಪ್ರಾಯ 35 ವರ್ಷ ಎಂಬವರು ಅಮಲು ಪದಾರ್ಥ ಸೇವಿಸಿ ಊಟ ಮಾಡಿ ಕೈತೊಳೆಯುವ ಬಗ್ಗೆ ಹೋದಾಗ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿದೆ ಎಂಬುದಾಗಿ ನಾಗಯ್ಯ ಮಡಿವಾಳರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 05/12 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ




  • ಕಾರ್ಕಳ: ಕು.ಸುಚೇಚಾ ಶೆಟ್ಟಿ (20) ಬಿನ್ ಸದಾನಂದ ಶೆಟ್ಟಿ (60) ವಾಸ: ಹಾರ್ದೊಟ್ಟು, ರೆಂಜಾಳ ಗ್ರಾಮದ, ಕಾರ್ಕಳ ತಾಲೂಕು ಎಂಬವರ ತಂದೆ ಸದಾನಂದ ಶೆಟ್ಟಿ ಪ್ರಾಯ 60 ವರ್ಷ ಎಂಬವರು ವಿಪರೀತ ಶರಾಬು ಕುಡಿತದ ಚಟಹೊಂದಿದ್ದು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 27.01.2012 ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಹಾರ್ದೊಟ್ಟು ಎಂಬಲ್ಲಿ ಅವರ ಮನೆಯ ಬಳಿಯ ಹಾಡಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ನರಳಾಡುತ್ತಿದ್ದವರನ್ನು ಚಿಕಿತ್ಸೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 27.01.2012 ರಂದು ಸಂಜೆ 5:30 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಕು.ಸುಚೇಚಾ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 06/12 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ




  • ಹಿರಿಯಡ್ಕ: ದಿನಾಂಕ 27.1.2012 ರಂದು ರಾತ್ರಿ 11:15 ಗಂಟೆಗೆ ಉಡುಪಿ ತಾಲೂಕಿನ ಅತ್ರಾಡಿ ಗ್ರಾಮದ ಅತ್ರಾಡಿಯಲ್ಲಿರುವ ಬಾಲಾಜಿ ಕಾಂಪ್ಲೆಕ್ಸ್ ಎಂಬಲ್ಲಿ ವಿನಯ ಕುಮಾರ್ ಎ. (24) ಬಿನ್ ಅನಂತ ಮೂರ್ತಿ, ವಾಸ: ನಂ. 10, ಬಾಲಾಜಿ ಕಾಂಪ್ಲೆಕ್ಸ್, ಅತ್ರಾಡಿ ಅಂಚೆ ಮತ್ತು ಗ್ರಾಮ ಎಂಬವರ ಅತ್ತೆ ಶ್ರೀಮತಿ ವಿಲ್ಮಾ ಪ್ರಕಾಶ್ ಸೋನ್ಸ್ (59), ಗಂಡ: ನೆಲ್ಸನ್ ಸೋನ್ಸ್ ವಾಸ: ಜೆರಿ ಮೇರಿ, ಯಲ್ಲಪ್ಪ, ರೂಮ್ ನಂಬ್ರ 11, ಬ್ಲಾಕ್ ನಂ.8, ಕುರ್ಲಾ ಅಂದೇರಿ ರೋಡ್, ಮುಂಬೈ ಎಂಬವರು ಎದೆ ನೋವೆಂದು ಹೇಳಿದ್ದರಿಂದ, ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಕರೆದು ಕೊಂಡು ಹೋದಲ್ಲಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ವಿನಯ ಕುಮಾರ್ ಎ. ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 03/12 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

1 comment:

Kramer said...

it is very commendable that you have taken such an effort to put down daily crimes in the form of an online journal. it will be a treasure in the long run.
Congratulations.