Daily Crimes Reported as on 24/01/12 at 07:00 Hrs
ಅಪಘಾತ ಪ್ರಕರಣಗಳು- ಕುಂದಾಪುರ ಸಂಚಾರ:ದಿನಾಂಕ 23/01/2012 ರಂದು ಸಮಯ ರಾತ್ರಿ 8:45 ಗಂಟೆಗೆ, ಕುಂದಾಪುರ ತಾಲೂಕಿನ, ಕೋಟೇಶ್ವರದ ನಟರಾಜ್ ಬಾರ್ ನ ಎದುರುಗಡೆ ರಾಷ್ರ್ಟೀಯ ಹೆದ್ದಾರಿ 66 ರ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ಕೊಟೇಶ್ವರ ಕಡೆಯಿಂದ, ಮನೆಯಾದ ಮೂಡು ಗೋಪಾಡಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ಮಂಜುನಾಥ ಕೆ (35) ತಂದೆ ಕೃಷ್ಣ ವಾಸ: ಮೂಡುಗೋಪಾಡಿ, ಗೋಪಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬವರಿಗೆ, ಆಪಾದಿತ ಗಜೆಂದ್ರ ಆಚಾರಿ ಎಂಬವರು ತನ್ನ ಕೆಎ 20 ವಿ 1042 ನೇ ಮೋಟಾರ್ ಸೈಕಲ್ ನ್ನು ಕುಂದಾಪುರ ಕಡೆಯಿಂದ ಕುಂಭಾಶಿ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ರಸ್ತೆಯ ಪೂರ್ವ ಬದಿಗೆ ನಿರ್ಲಕ್ಷತನದಿಂದ ಚಲಾಯಿಸಿ, ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಎಡಕಣ್ಣಿನ ಬಳಿ, ಎಡಕಿವಿ, ತಲೆಯ ಎಡಭಾಗ, ಎಡ ಕೈಯ ಮೊಣಗಂಟಿಗೆ ರಕ್ತಗಾಯ ಹಾಗೂ ಎಡಕಾಲಿನ ಗಂಟಿನ ಕೆಳಗೆ ಒಳ ನೋವು ಆಗಿರುವುದಾಗಿದೆ ಮತ್ತು ಅಪಘಾತದಿಂದ ಆಪಾದಿತನು ಗಾಯಗೊಂಡಿರುವುದಲ್ಲದೇ ಸದ್ರಿ ಮೋಟಾರ್ ಸೈಕಲ್ ಜಖಂಗೊಂಡಿರುವುದಾಗಿದ್ದು, ಗಾಯಾಳು ಪಿರ್ಯಾದಿ ಮಂಜುನಾಥ ಕೆ ರವರು ಕೋಟೇಶ್ವರದ ಡಾ||ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಮಂಜುನಾಥ ಕೆ. ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 08/2012 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಮಲ್ಪೆ: ದಿನಾಂಕ 22/01/2012 ರಂದು 17:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೋಹನ್ ದಾಸ ಕಿಣಿ (69) ತಂದೆ: ದಿವಂಗತ ಸಂಜೀವ ಕಿಣಿ ವಾಸ: ಕಲ್ಮಾಡಿ ಕೊಡವೂರು ಗ್ರಾಮ ರವರು ಮಲ್ಪೆ ಜಂಕ್ಷನ್ ನಲ್ಲಿರುವ ಅಂಗಡಿಯಿಂದ ಹೊರಗೆ ರಸ್ತೆಗೆ ಬಂದು ರಸ್ತೆಗೆ ಇಳಿದು ನಿಂತಿರುವಾಗ ವಡಭಾಂಡೇಶ್ವರ ಕಡೆಯಿಂದ ಮಲ್ಪೆ ಜಂಕ್ಷನ್ ಕಡೆಗೆ ಒಬ್ಬಾತನು ತನ್ನ ಕೆಎ 20-6903 ನಂಬ್ರದ ಮೋಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಎಡಕಾಲಿನ ಪಾದದ ಗಂಟಿನ ಮೇಲ್ಭಾಗದಲ್ಲಿ ಮೂಳೆ ಮುರಿತವಾಗಿದ್ದು, ಬಲಕೈಯಲ್ಲಿ ಚರ್ಮ ತರಚಿದ ಗಾಯಗಳಾಗಿರುತ್ತವೆ ಎಂಬುದಾಗಿ ಶ್ರೀ ಮೋಹನ್ ದಾಸ ಕಿಣಿ ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 12/2012 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ- ಕೋಟ: ದಿನಾಂಕ 19/01/2012 ರ ಸಂಜೆ 5:00 ಗಂಟೆಯಿಂದ ದಿನಾಂಕ 23/01/2012 ರ ಸಂಜೆ 4:30 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಪಾರಂಪಳ್ಳಿ ಗ್ರಾಮದ ಹೆಗ್ಗಡ್ತಿ ಓಣಿ ರಸ್ತೆಯಲ್ಲಿನ ವೀಣಾ ನಿಲಯ ಎಂಬ ಪಿರ್ಯಾದಿದಾರರಾದ ಕಲಾವತಿ (52) ಗಂಡ: ಆನಂದರಾಮ ಮಯ್ಯ ವಾಸ: ವೀಣಾ ನಿಲಯ ಹೆಗ್ಗಡ್ತಿ ಓಣಿ ರಸ್ತೆ ಪಾರಂಪಳ್ಳಿ ಗ್ರಾಮ ಉಡುಪಿ ತಾಲೂಕು ರವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಕಬ್ಬಿಣದ ಆಯುಧದಿಂದ ಒಡೆದು ಮನೆಯ ಒಳಗೆ ಪ್ರವೇಶಿಸಿ ಮನೆ ಒಳಗೆ ಕಪಾಟಿನಲ್ಲಿಟ್ಟಿದ್ದ 1) ಚಿನ್ನದ 2 ಬಳೆ- 26 ಗ್ರಾಂ, 2) ಬೆಳ್ಳಿ ತಂಬಿಗೆ-1, 500 ಗ್ರಾಂ, 3) ಬೆಳ್ಳಿ ಕವಳಿಗೆ ಸೌಟು & 2 ಲೋಟ-300 ಗ್ರಾಂ, 4) ನಗದು ರೂಪಾಯಿ-20,000/-ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ 1,20,000/-ರೂ ಆಗಬಹುದು ಎಂಬುದಾಗಿ ಕಲಾವತಿ ರವರು ನೀಡಿದ ದೂರಿನಂತೆ ಕೋಟ ಠಾನಾ ಅಪರಾಧ ಕ್ರಮಾಂಕ 14/2012 ಕಲಂ 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ - ಶಂಕರನಾರಾಯಣ: ಪಿರ್ಯಾದಿದಾರರಾದ ಶಂಕರ ಭೋವಿ (30) ತಂದೆ : ನಾಗಪ್ಪ ಭೋವಿ ವಾಸ : ಬರೆಗುಂಡಿ, ಕಮಲಶಿಲೆ ಗ್ರಾಮ, ಕುಂದಾಪುರ ತಾಲೂಕ ರವರ ಚಿಕ್ಕಪ್ಪ ನರಸಿಂಹ ಬೋವಿ ಎಂಬವರ ಮಗ ರತ್ನಾಕರ ಭೋವಿ (28) ತಂದೆ ನರಸಿಂಹ ಭೋವಿ ವಾಸ: ನಡುಮುದ್ರೆ, ಕಮಲಶಿಲೆ ಗ್ರಾಮ ಎಂಬವರು ಸುಮಾರು 3-4 ವರ್ಷಗಳಿಂದ ಬಿ.ಪಿ. ಖಾಯಿಲೆಯಿಂದ ಬಳಲುತ್ತಿದ್ದು ಅದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22/01/2012 ರಂದು ಆತನ ಮನೆಯಾದ ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ನಡುಮುದ್ರೆ ಎಂಬಲ್ಲಿ ರಾತ್ರಿ 10:00 ಗಂಟೆಗೆ ಊಟ ಮಾಡಿ ಎಲ್ಲರೂ ಮಲಗಿದ ಬಳಿಕ ಬಿ.ಪಿ. ಮಾತ್ರೆಯನ್ನು ಒಮ್ಮೆಲೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಹೊಟ್ಟೆ ಉರಿಯಿಂದ ಬೊಬ್ಬೆ ಹಾಕುತ್ತಿದ್ದ ರತ್ನಾಕರ ಭೋವಿಯನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23/01/2012 ರಂದು 17:15 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿರುತ್ತದೆ ಎಂಬುದಾಗಿ ಶಂಕರ ಭೋವಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 02/2012 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment