Daily Crimes Reported as on 23/01/12 at 19:30 Hrs
ಅಪಘಾತ ಪ್ರಕರಣಗಳು - ಹೆಬ್ರಿ: ಪಿರ್ಯಾದಿದಾರರಾದ ಕುಟ್ಟಿ @ ಸದಾನಂದ ಶೆಟ್ಟಿ(60), ತಂದೆ: ದಿವಂಗತ ರಾಜು ಶೆಟ್ಟಿ, ವಾಸ: ಗೋಳಿ ಪಲ್ಕೆ ಮನೆ ಕಡ್ತಲ, ಕಡ್ತಲ ಗ್ರಾಮ, ಕಾರ್ಕಳ ತಾಲೂಕು ರವರು ದಿನಾಂಕ: 22/01/2012 ರಂದು ತನ್ನ ಕೆಎ.20.ವಿ.2899 ನೇ ಮೋಟಾರ್ ಸೈಕಲ್ನಲ್ಲಿ ಮುನಿಯಾಲು ಪೇಟೆಯಿಂದ ತನ್ನ ಮನೆ ಕಡ್ತಲಕ್ಕೆ ಹೋಗುತ್ತಿರುವಾಗ್ಗೆ ಮದ್ಯಾಹ್ನ 1:30 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ವರಂಗ ಗ್ರಾಮದ ಮುನಿಯಾಲು ಮುದೆಲ್ ಕಡಿ ಕ್ರಾಸ್ ಬಳಿ ರಸ್ತೆಯಿಂದ ಕ್ರಾಸ್ ಆಗವರೇ ಕೈಯಿಂದ ಸಿಗ್ನಲ್ ಮಾಡಿ ತನ್ನ ಮೋಟಾರ್ ಸೈಕಲ್ನ್ನು ತಿರುಗಿಸಿದಾಗ ಹಿಂದಿನಿಂದ ಅಂದರೆ ಹೆಬ್ರಿ ಕಡೆಯಿಂದ ಕೆಎ.21.ಎ.42 ನೇ 407 ಟೆಂಪೋವನ್ನು ಅದರ ಚಾಲಕ ಉಮೇಶ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿರುತ್ತಾರೆ ಎಂಬುದಾಗಿ ಕುಟ್ಟಿ @ ಸದಾನಂದ ಶೆಟ್ಟಿ ರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 04/12 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕುಂದಾಪುರ ಸಂಚಾರ: ದಿನಾಂಕ 22/01/2012 ರಂದು ಮಧ್ಯಾಹ್ನ 2:00 ಗಂಟೆಗೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಜಾಲಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ಸುಹೇಲ್ ಸಾಹೇಲ್ (29) ತಂದೆ ಹುಸೇನ್ ಸಾಹೇಬ್ ನೀರಿನ ಟ್ಯಾಂಕ್ ಹತ್ತಿರ, ಕಂಡ್ಲೂರು ಕಾವ್ರಾಡಿ ಗ್ರಾಮ ರವರು ತನ್ನ ಮೋಟಾರ್ ಸೈಕಲ್ ನಲ್ಲಿ ಹೆಮ್ಮಾಡಿಯಿಂದ ಕುಂದಾಪುರ ಕಡೆಗೆ ಬರುತ್ತಿರುವಾಗ, ಅವರ ಮುಂದುಗಡೆಯಲ್ಲಿ ಅಂದರೆ ಹೆಮ್ಮಾಡಿ ಕಡೆಯಿಂದ ಕುಂದಾಪುರ ಕೆಡೆಗೆ ಕೆ.ಎ20-ಎಲ್-9275 ನೇ ಮೋಟಾರ್ ಸೈಕಲ್ ಸವಾರ ಉಮರ್ ಸಾಹೇಬ್ ಎಂಬವರು ತನ್ನ ಮೋಟಾರ್ ಸೈಕಲನ್ನು ವೇಗವಾಗಿ ಚಲಾಯಿಸುತ್ತಿದ್ದು, ಅವರ ಎದುರುಗಡೆಯಿಂದ ನಾಯಿಯೊಂದು ರಾಷ್ಟ್ರೀಯ ಹೆದ್ದಾರಿ 66 ನ್ನು ಆಕಸ್ಮಿಕವಾಗಿ ಹಾದು ಹೋದ ಕಾರಣ ನಾಯಿಗೆ ಡಿಕ್ಕಿ ಹೊಡೆಯುದನ್ನು ತಪ್ಪಿಸಲು ಒಮ್ಮಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ನ ಹತೋಟಿ ತಪ್ಪಿ ವಾಹನ ಸಮೇತ ಮಗುಚಿ ಬಿದ್ದು ಅವರ ಮುಖದ ಬಲ ಭಾಗ, ಕಣ್ಭಿನ ಹತ್ತಿರ ರಕ್ತಗಾಯ, ತಲೆಗೆ ಹಾಗೂ ಬಲಕಾಲಿನ ಗಂಟಿಗೆ ತರಚಿದ ಗಾಯವಾಗಿದ್ದು ಅಲ್ಲದೇ ಸದ್ರಿ ಮೋಟಾರ್ ಸೈಕಲ್ ಜಖಂಗೊಂಡಿರುವುದಾಗಿದ್ದು, ಗಾಯಾಳು ಉಮರ್ ಸಾಹೇಬರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಸುಹೇಲ್ ಸಾಹೇಲ್ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 07/2012 ಕಲಂ 279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಹಿರಿಯಡ್ಕ: ದಿನಾಂಕ 21/01/2012 ರಂದು ರಾತ್ರಿ 11:00 ಗಂಟೆಗೆ ಬೊಮ್ಮರಬೆಟ್ಟು ಗ್ರಾಮದ ಬಸ್ತಿ ಮೂರು ಮಾರ್ಗದ ಬಳಿ, ಸುಂದರ ನಾಯ್ಕ ಎಂಬವರು ಅಮಿತ್ ಎಂಬವರನ್ನು ಮೋಟಾರು ಸೈಕಲ್ ನಂಬ್ರ ಕೆಎ 20 ಇಎ 4192 ನೇದರಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು, ಕೋಟ್ನಕಟ್ಟೆಯಿಂದ ಬಸ್ತಿ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ಬಸ್ತಿ ಕಡೆಯಿಂದ ಕೋಟ್ನಕಟ್ಟೆ ಕಡೆಗೆ, ಮೋಟಾರು ಸೈಕಲ್ ನಂಬ್ರ ಕೆಎ20 ಎಕ್ಸ್ 8601 ನೇದರಲ್ಲಿ ಮೋಟಾರು ಸೈಕಲ್ ಸವಾರ ರಾಘವೇಂದ್ರ ಎಂಬವರು ಪ್ರವೀಣ್ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೋಟಾರು ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲ ಭಾಗದಲ್ಲಿ ಸವಾರಿ ಮಾಡಿಕೊಂಡು ಹೋಗಿ, ಮೋಟಾರು ಸೈಕಲ್ ನಂಬ್ರ ಕೆಎ 20 ಇಎ 4192 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕ್ ನಲ್ಲಿದ್ದ ಸವಾರ ಮತ್ತು ಸಹಸವಾರರು ಗಾಯಗೊಂಡಿದ್ದು, ಗಾಯಾಳು ಸುಂದರ ನಾಯ್ಕರವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ವೈದ್ಯಾಧಿಕಾರಿಯವರು ಯಾವುದೇ ತೊಂದರೆ ಇಲ್ಲವೆಂದು ತಿಳಿಸಿದಂತೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಬಳಿಕ ದಿನಾಂಕ 22/01/2012 ರಂದು ಸಂಜೆಯ ವೇಳೆಗೆ ಸುಂದರ ನಾಯ್ಕರವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿರುವುದರಿಂದ ವಾಪಾಸು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 23/01/2012 ರಂದು ಬೆಳಗ್ಗೆ 10:00 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ಕೃಷ್ಣ ನಾಯ್ಕ, (40) ತಂದೆ: ರಾಮ ನಾಯ್ಕ ವಾಸ: ದರ್ಖಾಸು ಮನೆ, ಕೊಂಡಾಡಿ, ಕುದಿ ಗ್ರಾಮ, ಉಡುಪಿ ತಾಲೂಕು.ರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 06/2012 ಕಲಂ 279, 337, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ - ಅಜೆಕಾರು: ದಿನಾಂಕ 22/01/12 ರಂದು ರಾತ್ರಿ 11:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನಯನ @ ಕಾವ್ಯ ರಾವ್ (25) ಗಂಡ: ಕರುಣಾಕರ ವಾಸ: ಬೋರಲಬೆಟ್ಟು ಅಂಡಾರು ಗ್ರಾಮ ರವರ ಗಂಡ ಕರುಣಾಕರ ರಾವ್ (35) ತಂದೆ: ಸಂಜೀವ ರಾವ್ ವಾಸ: ಬೋರಲಬೆಟ್ಟು ಅಂಡಾರು ಗ್ರಾಮರವರು ಅಂಡಾರು ಗ್ರಾಮದ ಬೊರಲಬೆಟ್ಟು ಎಂಬಲ್ಲಿ ಮನೆಗೆ ಬಂದು ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೆನ್ನೆಗೆ ಹಾಗೂ ಸೊಂಟಕ್ಕೆ, ಬಲ ಕೈಗೆ ಕೈ ಯಿಂದ ಹೊಡೆದು ನೋವುಂಟು ಮಾಡಿ, ಕೈ ಕಾಲು ಮುರಿದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಶ್ರೀಮತಿ ನಯನ ರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 01/12 ಕಲಂ 504, 323, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ - ಕುಂದಾಪುರ: ಪಿರ್ಯಾದಿದಾರರಾದ ಶಶಾಂಕ್ ರಾವ್ (30) ತಂದೆ: ಆನಂದ ರಾವ್ ವಾಸ: ಮೀನು ಮಾರ್ಕೇಟ್ ಬಳಿ, ಕಸಬಾ ಗ್ರಾಮ, ಕುಂದಾಪುರ ರವರ ತಮ್ಮ ಸನತ್ ಎಂಬವರು ಕಳೆದ 3 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22/01/2012 ರ ರಾತ್ರಿ 9:30 ಗಂಟೆಯಿಂದ ದಿನಾಂಕ 23/01/2012 ರ ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ಕಸಬಾ ಗ್ರಾಮದ ಮೀನು ಮಾರ್ಕೆಟ್ ರಸ್ತೆಯ ನಾಗ ಬೊಬ್ಬರ್ಯ ದೇವಸ್ಥಾನದ ಎದುರುಗಡೆ ಇರುವ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮೃತರ ಅಣ್ಣ ಶಶಾಂಕ್ ರಾವ್ ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 04/12 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment