Saturday, January 28, 2012

Daily Crime reports As on 28/01/2012 At 07:00 Hrs

ದರೋಡೆಗೆ ಹೊಂಚು ಹಾಕುತ್ತಿದ್ದವರ ಬಂಧನ

  • ಕುಂದಾಪುರ: ದಿನಾಂಕ 27/1/2012 ರಂದು ಬೆಳಗ್ಗಿನ ಜಾವ ಸುಮಾರು 4-30 ಗಂಟೆಗೆ ಆರೋಪಿಗಳಾದ . ಬೆಳ್ಳಿಯಪ್ಪ @ ಸುದೀರ ಡಿ.ಕೆ ಸೋಮವಾರ ಪೇಟೆ 2.ಮಂಜುನಾಥ ಲಿಂಗಪ್ಪ 3.ಸಂದೀಪ ಚಿಕ್ಕನ್ ಸಾಲ್ ರಸ್ತೆ ಕುಂದಾಪುರ ಇವರುಗಳು ಯಾವುದೋ ಅಂಗಡಿ, ಪಿಟ್ರೋಲ್ ಬಂಕ್ ರಸ್ತೆಯಲ್ಲಿ ಬರುವ ವಾಹನಗಳನ್ನು ದರೋಡೆ ಮಾಡುವ ಉದ್ದೇಶದಿಂದ ಆರೋಪಿಗಳು ಕೆ.ಎ 53 ಎ. 935 ನೇ ನಂಬ್ರದ ಈಚರ್ ಲಾರಿಯಲ್ಲಿ ಒಂದು ಮಾರಕಾಯಧವಾದ ಕಬ್ಬಿಣದ ಕತ್ತಿ ಮತ್ತು ಕಬ್ಬಿಣದ ರಾಡ್ ಮತ್ತು ಮೆಣಸಿನ ಪುಡಿ ಪ್ಯಾಕೇಟ್ ಹಿಡಿದುಕೊಂಡು ಕುಂದಾಪುರ ತಾಲೂಕು ವಡೇರ ಹೋಬಳಿ ಗ್ರಾಮದ ಬಸ್ರೂರು ಕಡೆಗೆ ಹೋಗುವ ರಸ್ತೆಯಲ್ಲಿ ನಿಂತುಕೊಂಡು ಹೊಂಚು ಹಾಕುತ್ತಿದ್ದವರನ್ನು ರಾತ್ರಿ ಗಸ್ತಿನಲ್ಲಿದ್ದ ಕುಂದಾಪುರ ಪಿಎಸ್ಐ (ಅಪರಾಧ)ಸಿ.ಎಂ ತಿಮ್ಮ ಶೆಟ್ಟಿ ರವರು ಸಿಬ್ಬಂದಿಗಳೊಂದಿಗೆ ದಸ್ತಗಿರಿ ಮಾಡಿ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 19/2012 ಕಲಂ: 399 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಕಾಪು: ದಿನಾಂಕ. 26.01.2012 ರಂದು ಮಧ್ಯಾಹ್ನ 1:15 ಗಂಟೆಗೆ ಮೂಡಬೆಟ್ಟು ಗ್ರಾಮದ ಕೆನರಾ ಬ್ಯಾಂಕ್ ಬಳಿ, ಪೋಸಾರು ಎಂಬಲ್ಲಿ ರಾ.ಹೆ 66 ರ ಪಶ್ಚಿಮ ಬದಿಯಲ್ಲಿ ಪಿರ್ಯಾದಿದಾರರಾದ ಎಲ್.ವಿ.ಗುರುರಾಜ್ ರವರು ತನ್ನ ಸ್ಕೂಟರ್ ನಂಬ್ರ ಕೆಎ-20-ಎಲ್-9889 ನ್ನು ಸವಾರಿ ಮಾಡಿಕೊಂಡು ಕಾಪುವಿನಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಸ್ಕೂಟರ್ನ ಎದುರುಗಡೆ ಹೋಗುತ್ತಿದ್ದ ಕೆಎಲ್-38-ಎ-1779 ನೇ ಲಾರಿ ಚಾಲಕನಾದ ಆರೋಪಿ ನಂದಕುಮಾರ್ ಎಂಬವರು ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಉಡುಪಿ ಕಡೆಯಿಂದ ಬರುತ್ತಿದ್ದ ಪಿಕ್ ಆಫ್ ವಾಹನ ತಾತ್ಕಾಲಿಕ ನಂಬ್ರ ಎಂ.ಹೆಚ್-02-ಟಿಸಿಎ 852 ಗೆ ಡಿಕ್ಕಿ ಹೊಡೆದ ಪರಿಣಾಮ ಪಿಕ್ಆಫ್ ವಾಹನವು ಪಿರ್ಯಾದಿದಾರರ ಸ್ಕೂಟರಿಗೆ ತಾಗಿ ಸ್ಕೂಟರ್ ಸವಾರರಾದ ಪಿರ್ಯಾದಿದಾರರಿಗೆ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ರಕ್ತ ಬರುವ ಗಾಯಉಂಟಾಗಿ ಉಡುಪಿ ಹೈ-ಟೆಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಸಂಬಂದ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2012 ಕಲಂ: 279,338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕೊಲ್ಲೂರು: ದಿನಾಂಕ 27.01.2012 ರಂದು 11:30 ಗಂಟೆಯ ಸಮಯ ಪಿರ್ಯಾದಿ ಶರಣಪ್ಪ (23) ತಂದೆ : ಸಂಗಪ್ಪ, ಅಂಬಲಪಾಡಿ, ಮಹಾಕಾಳಿ ರೋಡ್‌, ಉಡುಪಿ ಜಿಲ್ಲೆ ರವರು ತನ್ನ KA 20 B 6998 ನೇ ಇಂಡಿಗೋ ಕಾರನ್ನು ಚಲಾಯಿಸಿಕೊಂಡು ಕುಂದಾಪುರ-ಕೊಲ್ಲೂರು ರಾಜ್ಯ ಹೆದ್ದಾರಿಯಿಂದಾಗಿ ಕೊಲ್ಲೂರು ಕಡೆಗೆ ಬರುತ್ತಿದ್ದು, ಕೊಲ್ಲೂರು ಗ್ರಾಮದ ಭದ್ರಗುಂಡಿ ಬಳಿ ತಲುಪುತ್ತಿರುವಾಗ ಎದುರಿನಿಂದ ಬರುತ್ತಿದ್ದ KA 40 M 2495 ನೇ ಮಹೇಂದ್ರ ಬೊಲೆರೋ ವಾಹನದ ಚಾಲಕನು ತನ್ನ ಬಾಬ್ತು ಸದ್ರಿ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಂದ ಚಲಾಯಿಸಿಕೊಂಡು ಇನ್ನೊಂದು ವಾಹನವನ್ನು ಓವರ್‌ ಟೇಕ್ ಮಾಡಿ ತನ್ನ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ವಾಹನಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು, ಮುಂದಕ್ಕೆ ತಂದು ನಿಲ್ಲಿಸಿದಾಗ ಬೊಲೆರೋದ ಹಿಂದಿನಿಂದ ಬರುತ್ತಿದ್ದ KA 19 C 8555 ನೇ ಇನ್ನೊವಾ ಕಾರು ಬೊಲೆರೋ ಕಾರಿನ ಎಡಬದಿಗೆ ತಾಗಿರುತ್ತದೆ. ಈ ಸಂಬಂದ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2012 ಕಲಂ: 279 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ ನಗರ: ದಿನಾಂಕ 19-01-12ರಂದು ಪಿರ್ಯಾದಿ ರಮೇಶ, ತಂದೆ: ಮಾಧವ, ವಾಸ: ಲೇಬರ್‌ ಕಾಲೋನಿ, ಕನ್ನರಪಾಡಿ, ಉಡುಪಿ ರವರ ತಂದೆ ಮಾಧವರವರು ಸಂಜೆ 7:00ಗಂಟೆಯ ಸಮಯಕ್ಕೆ ರಾ.ಹೆ 66ರ ಕನ್ನರಪಾಡಿ ಬಳಿ ರಸ್ತೆಯನ್ನು ದಾಟುತ್ತಿರುವಾಗ್ಗೆ ಉಡುಪಿ ಕಡೆಯಿಂದ ಉಚ್ಚಿಲ ಕಡೆಗೆ ಕೆಎ 20 ವೈ 2262ನೇದರ ಹೀರೊ ಹೊಂಡಾ ಮೋಟಾರ್‌ ಸೈಕಲ್‌ ಸವಾರ ಎಲ್ಲೂರು ನಾರಯಣರಾವ್‌ರವರು ತಮ್ಮ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಪಿರ್ಯಾದಿದಾರರ ತಂದೆ ಮಾಧವರವರಿಗೆ ಢಿಕ್ಕಿ ಹೊಡೆದಿದ್ದು, ಈ ಅಪಘಾತದಿಂದ ಪಿರ್ಯಾದಿದಾರರ ತಂದೆಗೆ ಎಡತಲೆಯ ಹಿಂಬದಿಗೆ ಸಣ್ಣದೊಂದು ರಕ್ತಗಾಯವಾಗಿ, ತಲೆಯ ಎಡಬದಿಯಲ್ಲಿ ಉಬ್ಬಿಕೊಂಡಿದ್ದು, ಅವರನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಉಡುಪಿ ಹೈ-ಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಸಂಬಂದ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2012 ಕಲಂ: 279,338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸನ್ನಡೆತೆಗಾಗಿ ಮುಚ್ಚಳಿಕೆ:

  • ಗಂಗೊಳ್ಳಿ: ದಿನಾಂಕ:24/01/2012ರಂದು ಗಂಗೊಳ್ಳಿ ಪೊಲೀಸ್ ಠಾಣಾ ಸರಹದ್ದು ಹೊಸಾಡು ಗ್ರಾಮದ ಕಂಚುಗೋಡು ಬೀಚ್ ಬಳಿ ಅಂಬರೀಶ್ ಖಾರ್ವಿ ಹಾಗೂ ನಾಗರಾಜ ಖಾರ್ವಿರವರ ಗುಂಪುಗಳ ಮದ್ಯೆ ಘರ್ಷಣೆ ಉಂಟಾಗಿ ಗಂಗೊಳ್ಳಿ ಠಾಣಾಯಲ್ಲಿ ಅಕ್ರ 04/2012 ಕಲಂ 323, 324, ಜೊತೆಗೆ ಬಾದಂಸಂ ಮತ್ತು ಅಕ್ರ 05/2012 ಕಲಂ 323, 324, ಜೊತೆಗೆ 34 ಭಾದಂಸಂನಂತೆ ದೂರಿಗೆ ಪ್ರತಿ ದೂರುಗಳು ದಾಖಲಾಗಿ ತನಿಖೆಯಲ್ಲಿರುತ್ತದೆ ಆದುದರಿಂದ ಮೇಲ್ಕಂಡ ಆಪಾದಿತರು ತಮ್ಮ ಸಹಚರರನ್ನು ಸೇರಿಸಿಕೊಂಡು ಗ್ರಾಮದಲ್ಲಿ ಗಲಾಟೆ, ದೊಂಬಿ, ರಕ್ತಪಾತ ನಡೆಸುವ ಸಾಧ್ಯತೆ ಇದ್ದು, ಗ್ರಾಮದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ ಸದ್ರಿ ಪ್ರತಿವಾದಿಗಳು ರಾಜಕೀಯ ಆರ್ಥಿಕವಾಗಿ ಧಾರ್ಮಿಕವಾಗಿ ಬಲಿಷ್ಟರಾಗಿದ್ದು, ಅಲ್ಲದೇ ಪದೇ ಪದೇ ಇದೇ ರೀತಿಯ ಅಪರಾಧ ಮಾಡುವ ಚಾಳಿ ಹೊಂದಿದವರಾಗಿರುವುದರಿಂದ ಸದ್ರಿಯವರ ವಿರುದ್ದ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2012 ಕಲಂ: 107 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಗಂಗೊಳ್ಳಿ :ದಿನಾಂಕ:24/01/2012ರಂದು ಗಂಗೊಳ್ಳಿ ಪೊಲೀಸ್ ಠಾಣಾ ಸರಹದ್ದು ಹೊಸಾಡು ಗ್ರಾಮದ ಕಂಚುಗೋಡು ಬೀಚ್ ಬಳಿ ಅಂಬರೀಶ್ ಖಾರ್ವಿ ಹಾಗೂ ನಾಗರಾಜ ಖಾರ್ವಿರವರ ಗುಂಪುಗಳ ಮದ್ಯೆ ಘರ್ಷಣೆ ಉಂಟಾಗಿ ಗಂಗೊಳ್ಳಿ ಠಾಣಾಯಲ್ಲಿ ಅಕ್ರ 04/2012 ಕಲಂ 323, 324, ಜೊತೆಗೆ ಬಾದಂಸಂ ಮತ್ತು ಅಕ್ರ 05/2012 ಕಲಂ 323, 324, ಜೊತೆಗೆ 34 ಭಾದಂಸಂನಂತೆ ದೂರಿಗೆ ಪ್ರತಿ ದೂರುಗಳು ದಾಖಲಾಗಿ ತನಿಖೆಯಲ್ಲಿರುತ್ತದೆ ಆದುದರಿಂದ ಮೇಲ್ಕಂಡ ಆಪಾದಿತರು ತಮ್ಮ ಸಹಚರರನ್ನು ಸೇರಿಸಿಕೊಂಡು ಗ್ರಾಮದಲ್ಲಿ ಗಲಾಟೆ, ದೊಂಬಿ, ರಕ್ತಪಾತ ನಡೆಸುವ ಸಾಧ್ಯತೆ ಇದ್ದು, ಗ್ರಾಮದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ ಸದ್ರಿ ಪ್ರತಿವಾದಿಗಳು ರಾಜಕೀಯ ಆರ್ಥಿಕವಾಗಿ ಧಾರ್ಮಿಕವಾಗಿ ಬಲಿಷ್ಟರಾಗಿದ್ದು, ಅಲ್ಲದೇ ಪದೇ ಪದೇ ಇದೇ ರೀತಿಯ ಅಪರಾಧ ಮಾಡುವ ಚಾಳಿ ಹೊಂದಿದವರಾಗಿರುವುದರಿಂದ ಸದ್ರಿಯವರ ವಿರುದ್ದ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2012 ಕಲಂ: 107 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: