Friday, January 27, 2012

Daily Crime Reports As on 27/01/2012 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣ:

  • ಮಣಿಪಾಲ: ಪಿರ್ಯಾದಿ ಕೃಷ್ಣ ಆಚಾರ್ಯ(40), ತಂದೆ: ಶ್ರೀನಿವಾಸ ಆಚಾರ್ಯ, ವಾಸ: ರಾಂಪುರ, ಅಲೆವೂರು ಗ್ರಾಮ, ಉಡುಪಿ ತಾಲೂಕು ಇವರ ತಂದೆ ತಂದೆ ಶ್ರೀನಿವಾಸ ಆಚಾರ್ಯ (70 ವರ್ಷ) ರವರು ಮನೆಯ ಹತ್ತಿರದಲ್ಲೆ ಇರುವ ಅವರ ತಮ್ಮನ ಮನೆ ಶೋಭಾ ನಿಲಯದಲ್ಲಿ ವಾಸವಾಗಿದ್ದು, ದಿನಾಂಕ 26.01.2012 ರ ರಾತ್ರಿಯಿಂದ ದಿನಾಂಕ 27.01.2012 ರ ಬೆಳಿಗ್ಗೆ 09:00 ಗಂಟೆ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ಅಲೆವೂರು ಗ್ರಾಮ ರಾಂಪುರ ಎಂಬಲ್ಲಿ ಶೋಭಾ ನಿಲಯ ಮನೆಯ ಹಿಂದುಗಡೆ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರಿಗೆ ಕುಡಿತದ ಚಟವಿದ್ದು, ಅವರ ಪತ್ನಿ ತೀರಿಕೊಂಡ ಬಳಿಕ ಕುಡಿತ ಜಾಸ್ತಿ ಮಾಡಿದ್ದು, ಅದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ ಈ ಸಂಬಂದ ಮಣಿಪಾಲ ಠಾಣಾ ಯು.ಡಿ.ಆರ್‌ ಸಂಖ್ಯೆ 05/2012 ಕಲಂ: 174 ಸಿ.ಆರ್‌.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
  • ಕುಂದಾಪುರ: ಈ ದಿನ ದಿನಾಂಕ 27/01/2012 ರಂದು ಪಿರ್ಯಾದಿ ಅಶೋಕ ಪ್ರಾಯ 30 ವರ್ಷ ತಂದೆ ಲಕ್ಷ್ಮಣ ವಾಸ: ಅಗ್ನಿಶಾಮಕ ಠಾಣೆಯ ಹತ್ತಿರ, ಕೋಣಿ ಗ್ರಾಮ, ಕುಂದಾಪುರ ತಾಲೂಕು.ಇವರು ಕುಂಭಾಶಿಯ ವಿಜಯ ಬ್ಯಾಂಕ್ ಬಳಿ ರಾ.ಹೆ 66 ರ ಬದಿಯಲ್ಲಿ ನಿಂತಿರುವಾಗ ಸಮಯ ಸುಮಾರು ಮಧ್ಯಾಹ್ನ 2:30 ಗಂಟೆಗೆ, ಕುಂಬಾಶಿ ವಿಜಯ ಬ್ಯಾಂಕ್ ನ ಎದುರಿನ ರಾ.ಹೆ 66 ಪೂರ್ವ ಬದಿಯ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ, ತೆಕ್ಕಟ್ಟೆ ಕಡೆಯಿಂದ ಕೊಟೇಶ್ವರ ಕಡೆಗೆ ಬರುತ್ತಿದ್ದ KA20-W-3568 ನೇ ದ್ವಿಚಕ್ರ ವಾಹನಕ್ಕೆ, ಅದೇ ದಾರಿಯಲ್ಲಿ ಅಂದರೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬಂದ KA-47-3322 ನೇ ನಂಬ್ರದ ಟ್ಯಾಂಕರ್ ನ್ನು ಅದರ ಚಾಲಕ ರೀಯಾಜ್ ಅಹಮ್ಮದ್ ಇಸ್ಮಾಯಿಲೆ ಎಂಬವರು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ನಿರ್ಲಕ್ಷತನದಿಂದ ಸದ್ರಿ ದ್ವಿ ಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಮುಂದಕ್ಕೆ ಚಲಾಯಿಸಿದ ಪರಿಣಾಮ ದ್ವಿ ಚಕ್ರ ವಾಹನದ ಸವಾರ ರಾಘವೆಂದ್ರ ಐತಾಳ ಎಂಬವರ ಎಡಕಾಲಿಗೆ ಒಳನೋವು ಹಾಗೂ ರಕ್ತಗಾಯ ಮತ್ತು ಸಹ ಸವಾರರಾದ ಮಂಜುನಾಥ ಐತಾಳರ ಎರಡು ಕಾಲುಗಳಿಗೆ ರಕ್ತಗಾಯ ಮತ್ತು ಒಳ ನೋವು ಆಗಿದ್ದು, ಗಾಯಗೊಂಡವರನ್ನು ಚಿನ್ಮಯಿ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ,ಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ . ಈ ಸಂಬಂದ ಕುಂದಾಪುರ ಸಂಚಾರ ಠಾಣಾ ಅಪರಾಧ ಸಂಖ್ಯೆ 09/2012 ಕಲಂ: 279,337 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: