ಜೀವ ಬೆದರಿಕೆ ಪ್ರಕರಣ:
- ಬೈಂದೂರು :ದಿನಾಂಕ 26/01/2012 ರಂದು ಬೆಳಿಗ್ಗೆ ಸಮಯ 8-00 ಗಂಟೆಗೆ ಪಿರ್ಯಾದಿ ಜೋಗು ಪುಜಾರಿ ತಂದೆ:ನಾರಾಯಣಪೂಜಾರಿ ವಾಸ:- ಅರೆಮನೆ ಹಕ್ಲು ಶಿರೂರು ಗ್ರಾಮ ಕುಂದಾಪುರ ತಾಲೂಕು ಕುಂದಾಪುರ ತಾಲೂಕು ಶಿರೂರು ಗ್ರಾಮದ ಅರೆಮನೆಹಕ್ಲು ಎಂಬಲ್ಲಿಯ ತಮ್ಮ ಮನೆಯಿಂದ ತಮ್ಮ ಗದ್ದೆಯ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 8-10 ಗಂಟೆಗೆ ಆರೋಪಿತರಾದ ಸುರೇಂದ್ರ ಪೂಜಾರಿ, ಗಣೇಶ ಪೂಜಾರಿ, ಮಾಚ ಪೂಜಾರಿ, ಶಾರದ ಮತ್ತು ನಾಗು ಹಾಗೂ ಮಂಜುನಾಥ ಪೂಜಾರಿ ರವರು ಅಕ್ರಮ ಕೂಟ ಸೇರಿಕೊಂಡು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದು ನಂತರ ಆರೋಪಿತರ ಪೈಕಿ ಸುರೇಂದ್ರ ಪೂಜಾರಿ ಎಂಬವರು ಪಿರ್ಯಾದುದಾರರನ್ನು ಬಲವಾಗಿ ಹಿಡಿದುಕೊಂಡಿದ್ದು ಆರೋಪಿ ಗಣೇಶ ಪೂಜಾರಿ ಪಿರ್ಯಾದುದಾರರನ್ನು ಕಾಲಿನಿಂದ ತುಳಿದು ನಂತರ ಆರೋಪಿ ಮಂಜು ಪೂಜಾರಿಯು ಕೈಯಿಂದ ಪಿರ್ಯಾದುದಾರರಿಗೆ ಕೈಯಿಂದ ಹೊಡೆದು ನಂತರ ಆರೋಪಿ ಮಾಚ ಪೂಜಾರಿಯು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದು, ಆರೋಪಿ ಶಾರದಾ ಹಾಗೂ ನಾಗು ಎಂಬವರು ಅವಾಚ್ಯ ಶಬ್ದಗಳಿಂದ ಬೈದಿದ್ದು ಸದ್ರಿ ಜಗಳವನ್ನು ಬಿಡಿಸಲು ಬಂದ ಪಿರ್ಯಾದುದಾರರ ನಾದಿನಿ ನಾರಾಯಣಿ ಎಂಬವರಿಗೆ ಆರೋಪಿತರ ಪೈಕಿ ಶಾರದಾ ಹಾಗೂ ಸುರೇಂದ್ರ ಪೂಜಾರಿ ಕೈಯಿಂದ ಹೊಡೆದು ದೂಡಿ ಹಾಕಿದ್ದು ನಂತರ ಸದ್ರಿ ಹಲ್ಲೆಯಿಮದ ಪಿರ್ಯಾದುದಾರರಿಗೆ ಸೊಂಟ ಹಾಗೂ ಎದೆ ನೋವು ಕಾಣಿಸಿಕೊಂಡ ಮೇರೆಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಸಂಬಂದ ಬೈಂದೂರು ಠಾಣೆಯಲ್ಲಿ ಠಾಣಾ ಅಪರಾದ ಕ್ರಮಾಂಕ 2012 ಕಲಂ 143,147,,341,506,504,323.ಜೊತೆಗೆ 149 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
- ಬೈಂದೂರು: ದಿನಾಂಕ: 26/01/2012 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿ ಶ್ರೀಮತಿ ವಿಮಾಲಾವತಿ ಗಂಡ :ಮಂಜುನಾಥ್ ಪೂಜಾರಿ ವಾಸ: ಅರೆಮನೆ ಹಕ್ಲು ಶಿರೂರು ಗ್ರಾಮದ ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಶಿರೂರು ಗ್ರಾಮದ ಅರೆಮನೆ ಹಕ್ಲು ಎಂಬಲ್ಲಿಯ ತಮ್ಮ ಬಾಬ್ತು ಜಾಗದಲ್ಲಿ ಕೆಲಸ ಮಾಡಿಕೊಂಡಿರುವಾಗ ಆರೋಪಿ ಮೌಲಾನಾ ದಸ್ತಗಿರಿ ರವರು ಪಿರ್ಯಾದುದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರನ್ನು ಅವಾಚ್ಯ ಶಬ್ದಗಳಿಂದ ಬೈದು ನಂತರ ಪಿರ್ಯಾದುದಾಋರ ಕೈ ಹಿಡಿದು ಒಂದು ಕೋಲಿನಿಂದ ಪಿರ್ಯಾದುದಾರರ ಕೈಗೆ ಹಾಗೂ ಬೆನ್ನಿನ ಮೇಲೆ ಹೊಡೆದ ಹಲ್ಲೆ ನಡೆಸಿದ್ದು ನಂತರ ಆರೋಪಿಗಳಾದ ಆರ್ಮಕ್ಕಿ ರವಿ ಶೆಟ್ಟಿ , ಜೋಗು ಪೂಜಾರಿ, ಮರ್ಲಿ , ಗಿರಿಜಾ, ಅಶೋಕ ಎಂಬವರು ಪಿರ್ಯಾದುದಾರರನ್ನು ಹಾಗೂ ಪಿರ್ಯಾದುದಾರರ ಗಂಡನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಸಂಬಂದ ಬೈಂದೂರು ಠಾಣೆಯಲ್ಲಿ ಠಾಣಾ ಅಪರಾದ ಕ್ರಮಾಂಕ 2012 ಕಲಂ 22/2012 ಕಲಂ 447,504,324,506, ಜೊತೆಗೆ 149 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
- ಕಾರ್ಕಳ ಗ್ರಾಮಾಂತರ: ಪಿರ್ಯಾದಿ ಗಣೇಶ್ ಆಚಾರ್ಯ ಪ್ರಾಯ 34 ವರ್ಷ ತಂದೆ: ದಿ. ವಾದಿರಾಜ ಆಚಾರ್ಯ ವಾಸ: ಸಾಂತೂರು ಶೇಡಿಮನೆ, , ಸಾಂತೂರು ಗ್ರಾಮ, ಉಡುಪಿ ತಾಲೂಕು ಇವರು ತನ್ನ ಸ್ನೇಹಿತ ಸಂತೋಷ್ ಎಂಬವರ ಮೋಟಾರ್ ಸೈಕಲ್ ನಂಬ್ರ ಕೆ.ಎ.20.ಆರ್.1819 ನೇದರಲ್ಲಿ ಕುಳಿತುಕೊಂಡು ಅತ್ತೂರು ಚರ್ಚ್ ಕಡೆಯಿಂದ ಬೆಳ್ಮಣ್‌ಗೆ , ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಹೋಗುತ್ತಿರುವಾಗ ಎದುರಿನಿಂದ ಅಂದರೆ ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಇನ್ನೂ ನಂಬ್ರ ಆಗದ ಹೊಸ ಟವೇರಾ ಕಾರನ್ನು ಅದರ ಚಾಲಕ ಶಶಿಕಾಂತ್ ಮುಗೇರಾ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದ ಪರಿಣಾಮ ಟವೇರಾ ಕಾರು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರರಿಗೆ ಬಲಕಾಲಿಗೆ ಹಾಗೂ ಬಲಭುಜಕ್ಕೆ ಹಾಗೂ ಸಹ ಸವಾರ ಪಿರ್ಯಾದಿದಾರರಿಗೆ ಬಲಕಾಲಿನ ಮೊಣಗಂಟಿಗೆ, ಬಲಕೈ ಮೊಣಗಂಟಿಗೆ , ಮುಖಕ್ಕೆ ಮೂಗಿಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕಾರ್ಕಳ ಸ್ಪಂದನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಸಂಬಂದ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 09/2012. ಕಲಂ. 279,337 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕೋಟ: ದಿನಾಂಕ 26/012012 ರಂದು ಬೆಳಿಗ್ಗೆ 09:00 ಗಂಟೆ ಸಮಯಕ್ಕೆ ಪಿರ್ಯಾದಿ ಅಣ್ಣಪ್ಪ 32 ವರ್ಷ ತಂದೆ:ನಾಗ ವಾಸ:ಕೆರಾಡಿ ಕೊಡ್ಲಾಡಿ ಆವರ್ಸೆ ಗ್ರಾಮ ಇವರು ತನ್ನ ಮನೆಯಿಂದ ಆವರ್ಸೆ ಪೇಟೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಆರೋಪಿಯು ತನ್ನ ಬಾಬ್ತು ಕೆ.ಎ.20 ವೈ-1558 ನೇ ಮೋಟಾರು ಸೈಕಲಿನಲ್ಲಿ ಸಹ ಸವಾರನನ್ನು ಕುಳ್ಳರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆವರ್ಸೆ ಗ್ರಾಮದ ಆವರ್ಸೆ ಸೊಸೈಟಿ ಎದುರು ಗೋಳಿಅಂಗಡಿ ಕಡೆಗೆ ರಸ್ತೆಯ ಎಡ ಬದಿಯ ಮಣ್ಣು ರಸ್ತೆಯಲ್ಲಿ ಪಿರ್ಯಾದಿದಾರರ ಎದುರಿನಿಂದ ನಡೆದುಕೊಂಡು ಹೋಗುತ್ತಿದ್ದ ಶೇಖರ ಶೆಟ್ಟಿ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶೇಖರ ಶೆಟ್ಟಿಯವರ ತಲೆಗೆ ತೀವ್ರ ತರದ ಪೆಟ್ಟಾಗಿದ್ದು ಕೂಡಲೇ ಮೋಟಾರು ಸೈಕಲ್ ಸವಾರ ಹಾಗೂ ಅಲ್ಲಿ ಸೇರಿದ ಜನರು ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಈ ಸಂಬಂದ ಕೋಟ ಠಾಣಾ ಅಪರಾಧ ಕ್ರಮಾಂಕ 17/2012. ಕಲಂ. 279,338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
- ಕಾಪು: ದಿನಾಂಕ. 26.01.2012 ರಂದು ಬೆಳಿಗ್ಗೆ 8:30 ಗಂಟೆಗೆ ಯೆಣಗುಡ್ಡೆ ಗ್ರಾಮದ ಅಚ್ಚಡ ಶಾಲೆಯ ಹಿಂದುಗಡೆ, ಪಿರ್ಯಾದಿ ಇಮಾಮ್ ಹುಸೈನ್, 27 ವರ್ಷ, ತಂದೆ:- ಅಸೀಮ್ ಆಲಿ, ವಾಸ:- ಅಚ್ಚಡ ಶಾಲೆಯ ಬಿಂಬದಿ, ಏಣೆಗುಡ್ಡೆ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. ಇವರ ಮನೆಯ ಅಂಗಳದಲ್ಲಿ ಕೆಎ-20-ಬಿ-5670 ನೇ ಸುಮಾ ಗ್ರಾಂಡ್ ಕಾರನ್ನು ಆರೋಪಿ ಚಂದ್ರಶೇಖರ ಎಂಬವರು ಒಮ್ಮೇಲೆ ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿ ಅಂಗಳದಲ್ಲಿದ್ದ ಸಲೀಂ 1 ವರ್ಷ 2 ತಿಂಗಳಿನ ಮಗುವಿಗೆ ಬಲ ಕೆನ್ನಗೆ, ಬಲ ಭುಜ, ಬಲ ಮಂಡಿಯ ಹತ್ತಿರ ಹಾಗೂ ಎಡ ಕಾಲಿಗೆ ತರಚಿದ ಗಾಯವಾಗಿ ಉಡುಪಿ ಟಿ.ಎಂ.ಫೈ ಆಸ್ಪತ್ರೆಗೆ ದಾಖಲಾಗಿರುತ್ತಾನೆ . ಈ ಸಂಬಂದ ಕಾಪು ಠಾಣಾ ಅಪರಾಧ ಕ್ರಮಾಂಕ 14/2012. ಕಲಂ.337 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
- ಕಾರ್ಕಳ ಗ್ರಾಮಾಂತರ: ದಿನಾಂಕ: 26.01.2012 ರಂದು ಬೆಳಗ್ಗೆ 08:00 ಗಂಟೆಗೆ ಕಾರ್ಕಳ ತಾಲೂಕು ದುರ್ಗಾ ಗ್ರಾಮದ ದರ್ಖಾಸು ಮನೆ ಎಂಬಲ್ಲಿ ಪಿರ್ಯಾಧಿ ಶ್ರೀಮತಿ.ಪ್ರೇಮಾ (35) ಗಂಡ:ಗೋಪಾಲ ಪೂಜಾರಿ, ವಾಸ: ದಖಾಸು ಮನೆ. ತೆಳ್ಳಾರು ಅಂಚೆ, ದುರ್ಗಾ ಗ್ರಾಮ, ಕಾರ್ಕಳ ತಾಲೂಕು ಇವರ ಅಣ್ಣ ಸದಾನಂದ ಪೂಜಾರಿ ಎಂಬುವರು ತನ್ನ ಮನೆ ಬಳಿಯ ಗೇರು ಮರದ ಗೆಲ್ಲುಗಳನ್ನು ಕಡಿಯಲೆಂದು ಮರ ಹತ್ತಿದವರು ಆಕಸ್ಮಿಕವಾಗಿ ಮರದ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಧಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಈ ದಿನ ಬೆಳಗ್ಗೆ 04:00 ಗಂಟೆ ಸುಮಾರಿಗೆ ಮೃತ ಪಟ್ಟಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ. ಈ ಸಂಬಂದ ಕಾರ್ಕಳ ಗ್ರಾಮಾಂತರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ 04/2012. ಕಲಂ. 174 ಸಿ. ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಾಗಿದೆ.
No comments:
Post a Comment