Thursday, January 26, 2012

Daily Crime Reports As on 26/01/2012 At 07:00 Hrs

ಅಪಘಾತ ಪ್ರಕರಣ

  • ಪಡುಬಿದ್ರಿ: ಮಧುಚಂದ್ರ (22) ತಂದೆ: ಬಸವರಾಜು ವಾಸ: ಮುಳ್ಳುಗುಡ್ಡೆ ಮನೆ, ಶಂಕರನಾರಾಯಣ, ಕುಂದಾಪುರ ಇವರು ದುರ್ಗಾಂಬ ಬಸ್ಸು ನಂ:KA.20.B.5626 ನೇದರ ನಿರ್ವಾಹಕರಾಗಿದ್ದು, ಬಸವರಾಜ ಎಂಬವರು ಬಸ್ಸಿನ ಚಾಲಕರಾಗಿರುತ್ತಾರೆ. ದಿನಾಂಕ:25.01.2012 ರಂದು ಸದ್ರಿ ಬಸ್ಸನ್ನು ಕಾರ್ಕಳದಿಂದ ಪಡುಬಿದ್ರಿ ಕಡೆಗೆ ರಾಜ್ಯ ಹೆದ್ದಾರಿ 1 ರಲ್ಲಿ ಚಾಲಕ ಬಸವರಾಜ ರವರು ಚಲಾಯಿಸಿಕೊಂಡು ಬರುತ್ತಾ ಬಸ್ಸನ್ನು ಚಾಲಕ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ 03:00 ಘಂಟೆಗೆ ಸಾಂತೂರು ಗ್ರಾಮದ ಸಾಂತೂರುಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ 15 ಅಡಿ ಆಳಕ್ಕೆ ಬಿದ್ದು, ಮಧುಚಂದ್ರ ಹಾಗೂ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಾಮಾನ್ಯ ಗಾಯಗಳಾಗಿರುತ್ತದೆ ಎಂಬಿತ್ಯಾದಿ. ಬಗ್ಗೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 06/2012 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

  • ಶಿರ್ವಾ: ದಿನಾಂಕ 25/01/2012 ರಂದು 19:30 ಗಂಟೆಗೆ ಶ್ರೀಮತಿ.ಲಿಂಡಾ ಪೆರ್ನಾಂಡಿಸ್ (37) ಗಂಡ ಮೆಲ್ವೀನ್ ಫೆರ್ನಾಂಡಿಸ್ ಹೆಳೆ ಹಿತ್ಲು ಶಿರ್ವರವರು ಅವರ ಮನೆಗೆ ಬರುವ ದಾರಿಯಲ್ಲಿ ನೆರೆಮನೆಯ ಅನಿತಾ ಎಂಬವರ ತಮ್ಮ ಅನಿಲ್ ಎಂಬಾತನು ಜೀಪು ಚಲಾಯಿಸಿಕೊಂಡು ಬರುತ್ತಿದ್ದಾಗ ನೀನು ಎಲ್ಲಿಗೆ ಹೋಗುತ್ತಿ ಎಂದು ಕೇಳಿದಕ್ಕೆ ಆತನು ನೀನು ಯಾರು ಕೇಳುವವಳು ಎಂದು ಮೊಣ ಕಾಲಿನಿಂದ ಅವರ ಹೊಟ್ಟೆಯ ಕೆಳಗೆ ತುಳಿದು ಜಖಂ ಗೊಳಿಸಿದ್ದು ಜೀಪಿನಲ್ಲಿ ಇದ್ದ ರಿಚರ್ಡ್ ಫೆರ್ನಾಂಡಿಸ್ ಎಂಬವರು ಮೈ ಮೇಲೆ ಕೈ ಹಾಕಿ ಮಾನಭಂಗ ಉಂಟು ಮಾಡಿದ್ದು, ನಂತರ ಅಲ್ಲಿಗೆ ಬಂದ ಅನಿತಾ ಫೆರ್ನಾಂಡಿಸ್, ಮತ್ತು ಅವರ ಮಗಳು ರೊಸಿಟಾ ಫೆರ್ನಾಂಡಿಸ್ ಕೈಯಿಂದ ಹೊಡೆದು ,ಮಗ ರಾಜೇಶ ಫೆರ್ನಾಂಡಿಸ್ ಎಂಬಾತನು ಅವರ ಕುತ್ತಿಗೆ ಒತ್ತಿ ಹಿಡಿದಿರುತ್ತಾರೆ ಎಂಬಿತ್ಯಾದಿ. ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 07/2011 ಕಲಂ 143,147,323,354, ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಿರ್ವಾ: ದಿನಾಂಕ 25-01-2012 ರಂದು ರಾತ್ರಿ 19-25 ಗಂಟೆಗೆ ರಿಚರ್ಡ್ ಪೆರ್ನಾಂಡಿಸ್ ತಂದೆ ಇಗ್ನೇಶಿಯಸ್ ಫೆರ್ನಾಂಡಿಸ್ ವಾಸ ಪಾಲಮೆ ದರ್ಖಾಸು ಶಿರ್ವ ಗ್ರಾಮ ಇವರು ತನ್ನ ಹೆಂಡತಿಯ ತಮ್ಮ ಆನಿಲ್ ನೋರಾಹ್ನ ಎಂಬವರ ಜೊತೆಗೆ ಪಾಲಮೆ ದರ್ಖಾಸು ಎಂಬಲ್ಲಿ ಜೀಪಿನಲ್ಲಿ ಬರುತ್ತಿರುವಾಗ ಆರೋಪಿ ಪ್ರವೀಣ ಪೆರ್ನಾಂಡಿಸನು ಜೀಪು ಹಿಂದಕ್ಕೆ ಹೋಗದಂತೆ ಟೆಂಪೋ ಅಡ್ಡ ಇಟ್ಟು ಜೀಪನ್ನು ಮುಂದಕ್ಕೆ ಚಲಾಯಿಸಿಕೊಂಡು ಬರುವಾಗ ಆರೋಪಿ ಶ್ರೀಮತಿ ಲಿಂಡ ಪೆರ್ನಾಂಡಿಸ್ ಜೀಪಿನ ಒಳಗೆ ಕೈ ಹಾಕಿ ಜೀಪಿನ ಕೀ ತೆಗೆಯಲು ಪ್ರಯತ್ನಿಸಿ ಚಾಲಕ ಆನಿಲ ಕೈಗೆ ಪರಿಚಿ ಗಾಯಗೊಳಿಸಿದ್ದು, ಗಲಾಟೆ ಕೇಳಿ ಅಲ್ಲಿಗೆ ಬಂದ ಅವರ ಮಗಳು ರೋಸಿಟಾ ಎಂಬವರಿಗೆ ಪ್ರವೀಣನು ಕೆನ್ನೆಗೆ ಹೊಡೆದು, ಮೈ- ಕೈ ಗೆ ಪರಚಿ ಗಾಯಗೊಳಿಸಿರುತ್ತಾನೆ. ಆರೋಪಿ ಹೆರಿಕ್ ಫೆರ್ನಾಂಡಿಸ್ ಅವರ ಕೆನ್ನೆಗೆ ಕೈ ಯಿಂದ ಹೊಡೆದು ಗಾಯಗೊಳಿಸಿದ್ದು , ರೋಸಿಟಾಗೆ ಅವಾಚ್ಯ ಶಬ್ದದಿಂದ ಬೈದು ಮೈ ಮೇಲೆ ಕೈ ಹಾಕಿ ಮಾನಭಂಗ ಮಾಡಿರುತ್ತಾನೆ ಅಲ್ಲದೆ ಕೊಲ್ಲದೆ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿ. ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 08/2012 ಕಲಂ 323,354,504,506,ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ:
  • ಬೈಂದೂರು: ದಿನಾಂಕ 24/01/2012 ಸಂಜೆ 16.45 ಗಂಟೆಯಿಂದ 25/01/2012 ಬೆಳಿಗ್ಗೆ 09.30 ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಗೋಳಿಹೊಳೆ ಗ್ರಾಮದ ಅರೆಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ಕೋಣೆಯಲ್ಲಿ ಇರಿಸಿದ್ದ ಭಾರತ್ ಕಂಪನಿಯ 1 ಸಿಲಿಂಡರ S.R NO 217484-T ನ್ನು ಯಾರೋ ಕಳ್ಳರು ಮುಖ್ಯ ಶಿಕ್ಷಕರ ಕೋಣೆಯ ಬಾಗಿಲಿಗೆ ಅಳವಡಿಸಿದ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸಿಲಿಂಡರಿನ ಅಂದಾಜು ಮೌಲ್ಯ ರೂ 2000/- ಆಗಬಹುದು ಎಂಬಿತ್ಯಾದಿ. ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 20/12 ಕಲಂ;454,457,380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಗಂಗೊಳ್ಳಿ: ರವೀಂದ್ರ ತಂದೆ: ಶ್ರೀನಿವಾಸ ಆಚಾರಿ ವಾಸ: ಬಾಳೆಹಿತ್ಲು ಶ್ರೀ ರಾಘವೇಂದ್ರ ನಿಲಯ ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ಹಿರಿಯ ಅಣ್ಣ ರಾಘವೇಂದ್ರ ದಿನಾಂಕ: 25/01/2012ರಂದು ಕೆಲಸಕ್ಕೆ ರಜೆ ಮಾಡಿದ್ದು ಮನೆಯಲ್ಲಿ ಇದ್ದು ಸಂಜೆ 05:00ಗಂಟೆಗೆ ಮನೆಯಿಂದ ಪ್ರಶಾಂತನ ಮನೆಗೆ ಕೆಲಸದ ಬಗ್ಗೆ ಮಾತಾಡಿಕೊಂಡು ಬರುವುದಾಗಿ ತಿಳಿಸಿ ಮನೆಯಿಂದ ಹೋಗಿರುತ್ತಾನೆ ಸಂಜೆ 05:45ಗಂಟೆ ಸಮಯಕ್ಕೆ ರವೀಂದ್ರ ರವರ ಮನೆಗೆ ಸಾರ್ವಜನಿಕರು ಬಂದು ರಾಘವೇಂದ್ರನು ರೈಲಿನ ಅಡಿಗೆ ಬಿದ್ದಿರುವುದಾಗಿ ಮಾಹಿತಿ ನೀಡಿದ್ದು ಆಗ ಅವರು ಹೋಗಿ ನೋಡಲಾಗಿ ಅವರ ಅಣ್ಣ ರಾಘವೆಂದ್ರ ಮೃತಪಟ್ಟಿದ್ದು, ಅಲ್ಲಿ ಇದ್ದ ರೈಲ್ವೆ ಗ್ಯಾಂಗ್ ಮ್ಯಾನ್ರವರು ಸಂಜೆ 05:15ಗಂಟೆಗೆ ಮಂಗಳೂರಿನಿಂದ ಮುಂಬೈಗೆ ಹೋಗುವ ಮತ್ಸ್ಯಗಂಧ ಎಕ್ಸ್ಪ್ರೆಸ್ರೈಲಿನಡಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಬಗ್ಗೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 01/2012 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ದಾಮೋದರ್ ಖಾರ್ವಿ(24) ತಂದೆ: ರಾಮ ಖಾರ್ವಿ ವಾಸ: ಬುಕ್ಕಣೆ ಮನೆ ಮಡಿಕಲ್, ಉಪ್ಪುಂದ ಗ್ರಾಮ ಕುಂದಾಪುರ ತಾಲೂಕು ಇವರ ಚಿಕ್ಕಪ್ಪ ಗೋವರ್ಧನ್ ಖಾರ್ವಿ(45) ಯವರು ದಿ:25/01/2012 ರಂದು ಬೆಳಗಿನ ಜಾವ ಸಮಯ ಸುಮಾರು 05:00 ಗಂಟೆಗೆ ಪಾತಿ ದೋಣೆಯಲ್ಲಿ ಮೀನುಗಾರಿಕೆ ಮಾಡುವರೇ ಉಪ್ಪುಂದ ಗ್ರಾಮದ ಮಡಿಕಲ್ ಸಮೀಪದ ಅರಬ್ಬೀ ಸಮುದ್ರಕ್ಕೆ ಮನೆಯಿಂದ ಹೋದವರು ಮೀನುಗಾರಿಕೆ ಮುಗಿಸಿ ಸಮಯ ಸುಮಾರು 08:00 ಗಂಟೆಗೆ ಅರಬ್ಬೀ ಸಮುದ್ರದಲ್ಲಿ ದೋಣೆಯನ್ನು ಹುಟ್ಟು ಹಾಕುತ್ತಾ ದಡದ ಕಡೆಗೆ ಬರುತ್ತಿರುವಾಗ ದಡದ ಸಮೀಪ ಸಮುದ್ರದಲ್ಲಿ ನೀರಿನ ಅಲೆಯ ಹೊಡೆತಕ್ಕೆ ಪಾತಿ ದೋಣೆ ಸಿಕ್ಕಿ ಮಗುಚಿ ಬಿದ್ದು ಪಾತಿ ದೋಣೆಯಲ್ಲಿದ್ದ ಗೋವರ್ಧನ್ ಖಾರ್ವಿಯವರು ಸಮುದ್ರದ ನೀರಿನಲ್ಲಿ ಬಿದ್ದು ಮುಳುಗಿ ಉಸಿರು ಕಟ್ಟಿ ಮೃತಪಟ್ಟಿರುವುದಾಗಿದೆ. ಎಂಬಿತ್ಯಾದಿ . ಬಗ್ಗೆ ಬೈಂದೂರು ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 02/2012 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: