Wednesday, January 25, 2012

Daily Crime Reports As on 25/01/2012 At 19:30 Hrs

ಹಲ್ಲೆ ಪ್ರಕರಣ
  • ಕುಂದಾಪುರ: ದಿನಾಂಕ 22-01-2012 ರಂದು ರಾತ್ರಿ ಆರೋಪಿತರಾದ 1) ಅಲ್ತಾಫ್, 2) ಆಸೀಫ್ ಮತ್ತು 3) ಫಯಾಜ್ ಗಳು ಆಸಿರ್ ಹುಸೈನ್ (31) ತಂದೆ: ಹುಸೈನ್ ಸಾಹೇಬ ವಾಸ: ಜನತಾ ಕಾಲೋನಿ ಮೂಡುಗೋಪಾಡಿ ಕುಂದಾಪುರ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ತಡೆಯಲು ಬಂದ ಆಸಿರ್ ಹುಸೈನ್ ರವರ ಹೆಂಡತಿ ಮಮ್ತಾಜ್ ಇವರಿಗೂ ಕೈಯಿಂದ ಹೊಡೆದು ನೋವುಂಟುಮಾಡಿರುವುದಾಗಿದೆ. ಹಣದ ವಿಚಾರದಲ್ಲಿ ಇದ್ದ ವೈಷಮ್ಯದಿಂದ ಆರೋಪಿಗಳು ಕೃತ್ಯ ಮಾಡಿದ್ದಾಗಿದೆ ಎಂಬಿತ್ಯಾದಿ. ಬಗ್ಗೆ ಆಸಿರ್ ಹುಸೈನ್ ಇವರ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 16/12 ಕಲಂ: 504 323 ಜೊತೆಗೆ 34 .ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 22-01-2012 ರಂದು ರಾತ್ರಿ 11:30 ಗಂಟೆಗೆ ಮೊಹಮ್ಮದ್ ಅಲ್ತಾಫ್ (36) ತಂದೆ: ಅಬ್ದುಲ್ ರೆಹಮಾನ್ ವಾಸ: ನೇರಂಬಳ್ಳಿ ಹಂಗ್ಳೂರು ಗ್ರಾಮ ಕುಂದಾಪುರ ಇವರು ನೆರಂಬಳ್ಳಿಯ ಮನೆಯ ಅಂಗಳದಲ್ಲಿ ನಿಂತುಕೊಂಡಿದ್ದಾಗ ಆರೋಪಿ ಆಸಿರ್ ಎಂಬವರು ಮೊಹಮ್ಮದ್ ಅಲ್ತಾಫ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮುಖಕ್ಕೆ ಕೈಗೆ ಎದೆಗೆ ಕೈಯಿಂದ ಹೊಡೆದು ರಾಡ್ ತೋರಿಸಿ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾಗಿದೆ ಎಂಬಿತ್ಯಾದಿ . ಬಗ್ಗೆ ಮೊಹಮ್ಮದ್ ಅಲ್ತಾಫ್ ಇವರ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 17/12 ಕಲಂ: 323 504 506(2) .ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 22-01-2012 ರಂದು ಚಂದ್ರಶೇಖರ ಡಿ.ಕೆ. (37) ತಂದೆ: ಡಿ.ಕೆ. ಅಣ್ಣಪ್ಪ ವಾಸ: ಪಡುವರಿ ಬೈಂದೂರು ಇವರು ತನ್ನ ಪತ್ನಿ ಪ್ರತಿಮಾಳ ರಾಜಿ ಪಂಚಾಯತಿಗೆ ಕುಂದಾಪುರಕ್ಕೆ ಬಂದಿದ್ದು, 7:15 ಗಂಟೆಗೆ ಹಂಗಳೂರು ಸರ್ಜನ್ ಆಸ್ಪತ್ರೆಯ ಎದುರು ಬರುತ್ತಿರುವಾಗ ಆರೋಪಿತರಾದ 1) ಗಣೇಶ್ ಮಯ್ಯಾಡಿ 2) ರತ್ನಾಕರ 3) ಸುಧೀರ್ 4) ಚಂದ್ರಶೇಖರ 5) ಸೋಮ 6) ಅಣ್ಣಪ್ಪಯ್ಯನ ಮಗ ಸುರೇಶ್ ಪಡುವರಿ 7) ರಾಮನ ಮಗ ಸತೀಶ್ 8) ಸಂದೀಪ್ @ ದೀಪ 9) ಬಟವಾಡಿ ಶೇಷಯ್ಯನ ಮಗ ಸತೀಶ್ ಮತ್ತು 10) ಮಹಾಬಲೇಶ್ವರನ ಮಗ ಹರೀಶ ಹೋಬಳಿದಾರ್ ಇವರುಗಳು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಅವಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾಗಿದೆ ಎಂಬಿತ್ಯಾದಿ. ಬಗ್ಗೆ ಚಂದ್ರಶೇಖರ ಡಿ.ಕೆ. ಇವರ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 18/12 ಕಲಂ: 323 504 506 ಜೊತೆಗೆ 149 .ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: