Wednesday, January 25, 2012

Daily Crime Reports As on 25/01/2012 At 07:00 Hrs

ಅಪಘಾತ ಪ್ರಕರಣ

  • ಕೋಟಾ: ದಿನಾಂಕ 24/01/2012 ರಂದು ಪಿರ್ಯಾದಿದಾರರಾದ ಚಂದ್ರನಾಯ್ಕ (39) ಬಿನ್ ಲಕ್ಷ್ಮಣ ನಾಯ್ಕ ವಾಸ: ಚಂಬೂರು ಶಿರಿಯಾರ ಗ್ರಾಮ ಇವರು ಹಾಗೂ ಅವರ ಭಾವ ಚಂದ್ರ ನಾಯ್ಕ ಎಂಬವರು ಶಿರಿಯಾರ ಗ್ರಾಮದ ಸಾಬರಕಟ್ಟೆ ನಂದಗೋಕುಲ ಹೋಟೆಲ್ ನಲ್ಲಿ ಚಹಾ ಕುಡಿದು ಪಿರ್ಯಾದಿದಾರರು ಅವರ ಮನೆ ಕಡೆಗೆ ಹೊರಟಿದ್ದು, ಆ ಸಮಯ ಅವರ ಬಾವ ಚಂದ್ರ ನಾಯ್ಕರವರು ಪಿರ್ಯಾದಿದಾರರ ಎದುರಿನಿಂದ ಸೈಕಲ್ ನಲ್ಲಿ ಕುಳಿತು ಹೋಗುತ್ತಿದ್ದು, ಸಮಯ 09.45 ಗಂಟೆಗೆ ಸಾಬ್ರಕಟ್ಟೆಯ ಸ.ಹಿ.ಪ್ರಾ.ಶಾಲೆಯ ಎದುರು ತಲುಪುವಾಗ ಸಾಬ್ರಕಟ್ಟೆ ಕಡೆಯಿಂದ ಬಿಲ್ಲಾಡಿ ಕಡೆಗೆ ಆರೋಪಿಯು ತನ್ನ ಬಾಬ್ತು ಲಾರಿ ನಂಬ್ರ ಕೆಎ 20 ಎಎ 8000 ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಭಾವನಿಗೆ ಢಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದು ಸದ್ರಿ ಅಪಘಾತದಿಂದ ಪಿರ್ಯಾದಿದಾರರ ಭಾವ ಚಂದ್ರ ನಾಯ್ಕರವರಿಗೆ ಬಲಕಾಲಿಗೆ ರಕ್ತಗಾಯವಾಗಿ ಮೂಳೆಮುರಿತವಾಗಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಎಂಬುದಾಗಿ ಚಂದ್ರನಾಯ್ಕರವರು ನೀಡಿದ ದೂರಿನಂತೆ ಕೋಟಾ ಠಾಣಾ ಅಪರಾಧ ಕ್ರಮಾಂಕ 15/2012 ಕಲಂ 279 338 ಐ.ಪಿ.ಸಿ & 134(ಎ)&(ಬಿ) ಐ.ಎಂ.ವಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಗಂಗೊಳ್ಳಿ: ದಿನಾಂಕ 24/01/2012ರಂದು ಪಿರ್ಯಾದಿದಾರರಾದ ಆನಂದ ಖಾರ್ವಿ (33) ಬಿನ್ ಅಚ್ಚುತ ಖಾರ್ವಿ ವಾಸ: ಬೇಲಿಕೇರಿ ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರು ಸಾಸ್ತಾನ ಕೋಡಿಗೆ ಗೆಂಡಕ್ಕೆ ಹೋಗಿ ಬರುವಾಗ ಕುಂದಾಪುರದಿಂದ ಮಹಾದೇವಿ ಬಸ್ಸಿನಲ್ಲಿ ಬಂದಿದ್ದು ಪಿರ್ಯಾದಿದಾರರ ಎದುರಿನ ಸೀಟಿನಲ್ಲಿ ಅವರಿಗೆ ಪರಿಚಯವಿರುವ ರೆಹನರವರು ಅವರ ಕುಳ್ಳಿತುಕೊಂಡಿದ್ದ ಅವನ ಪಕ್ಕದಲ್ಲಿ ಒಂದು ಹೆಂಗಸು ಒಂದು ಮಗುವನ್ನು ಎತ್ತಿಕೊಂಡು ಕುಳ್ಳಿರಿಸಿಕೊಂಡಿರುತ್ತಾರೆ. ರೆಹನನು ಮೊಬೈಲ್‌ನಲ್ಲಿ ಮಾತನಾಡುವಾಗ ಹೆಂಗಸಿಗೆ ಅತನ ಕೈ ತಾಗುತ್ತಿತ್ತು ಪಿರ್ಯಾದಿದಾರರು ಆತನಿಗೆ ಸರಿಯಾಗಿ ಕುಳಿತುಕೊಳ್ಳುವಂತೆ ಹೇಳಿದಾಗ ನೀನು ಯಾರು ನಿನಗೇಕೆ ಎಂದು ಹೇಳಿದ ಅದೇ ವಿಚಾರದಲ್ಲಿ ಪಿರ್ಯಾದಿದಾರರಿಗೂ ರೆಹನರವರಿಗೂ ಮಾತಿಗೆ ಮಾತು ಬೆಳೆದು ರೆಹನನು ಮೊಬೈಲ್‌ನಲ್ಲಿ ಮಾತನಾಡಿ ಆತನ ಜನರಿಗೆ ಮ್ಯಾಗನೀಸ್‌ ರೋಡಿಗೆ ಬರುವಂತೆ ಹೇಳಿರುತ್ತಾನೆ. ಬಸ್ಸ್‌ ಮ್ಯಾಂಗನೀಸ್‌ ರಸ್ತೆಗೆ ಹೋದಾಗ ರೆಹನ ಜಾಫರ್ (ಗ್ಯಾರೆಜ್‌) ಸಾಧಿಕ್‌ ಹಾಗೂ ಇತರ 15 ಜನ ಸಮಾನ ಉದ್ದೇಶದಿಂದ ಪಿರ್ಯಾದಿದಾರನ್ನು ಬಸ್ಸಿನಿಂದ ಎಳೆದು ಹಾಕಿ ಹೊಡೆದಿದ್ದು ಮರದ ರೀಪಿನಿಂದ ಬೆನ್ನಿಗೆ ಮತ್ತು ಸೊಂಟಕ್ಕೆ ಹೊಡೆದರು ಪಿರ್ಯಾದಿದಾರರ ಕೈಯಲ್ಲಿ ಮಗು ಇದ್ದು ಆಪಾದಿತರು ಪಿರ್ಯಾದಿದಾರರನ್ನು ಕೈಗಳಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಜನ ಸೇರಿದ್ದನ್ನು ಕಂಡು ಓಡಿ ಹೋದರು ಈ ಗಲಾಟೆ ನಡೆಯುವಾಗ ಸಮಯ ಸಂಜೆ 06:00ಗಂಟೆ ಆಗಿರತ್ತದೆ ಎಂಬುದಾಗಿ ಆನಂದ ಖಾರ್ವಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 08/2012 ಕಲಂ 143, 147, 148 323 324, 504,ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

  • ಮಣಿಪಾಲ: ದಿನಾಂಕ 24/01/2012 ರಂದು ಬೆಳಿಗ್ಗೆ 9:00 ಗಂಟೆಯಿಂದ 12:45 ಗಂಟೆಯ ಮಧ್ಯ ಅವಧಿಯಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅನಂತ ನಗರದಲ್ಲಿರುವ ಪಿರ್ಯಾದಿದಾರರ ಬಾಬ್ತು ಸಫಲಹೌಸ್‌‌, 1ನೇ ಮಹಡಿಯಲ್ಲಿರುವ ಮನೆಯ ಹಿಂಬದಿ ಬಾಗಿಲು ತೆರೆದಿದ್ದ ರೂಮಿನಲ್ಲಿ ಇರಿಸಿದ್ದ ರೂ.25,000/- ಮೌಲ್ಯದ ಮೊಬೈಲ್ ಪೋನ್‌ನ್ನು ಮತ್ತು ಪಿರ್ಯಾದಿಯ ಸಹವಾಸಿ ಅಚಿಂತಾ ಸಹಾಯಾ ಎಂಬವರ ಪರ್ಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಭಾರ್ಗವ ಅಲ್ತೂರಿ (20), ಬಿನ್ ಎ ವೆಂಕಟೇಶ್ವರನ್ ರಾವ್, ವಾಸ: ಅಸಾಫ ಹೌಸ್‌, 1ನೇ ಪ್ಲೋರ್‌, ಅನಂತ ನಗರ, ಮಣಿಪಾಲ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 24/2012 ಕಲಂ: 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: