Tuesday, January 24, 2012

Daily Crime Reports As on 24/01/2012 At 19:30 Hrs

ಅಪಘಾತ ಪ್ರಕರಣಗಳು

  • ಶಂಕರನಾರಾಯಣ: ದಿನಾಂಕ: 23/01/2012 ರಂದು ಪಿರ್ಯಾದಿದಾರರಾದ ಚಂದ್ರ ಆಚಾರಿ (57) ದಿ: ಮಹಾಬಲ ಆಚಾರಿ ವಾಸ: ಹೆದ್ದಾರಿ ಬೆಟ್ಟು,ಮೂಡುಬಗೆ ಅಂಪಾರು ಗ್ರಾಮ, ಕುಂದಾಪುರ ತಾಲೂಕು ಕುಂದಾಪುರ ತಾಲೂಕು ಇವರು ತನ್ನ ಸ್ಚೇಹಿತ ಶ್ರೀನಿವಾಸ ಕಿಣಿಯವರೊಂದಿಗೆ ತನ್ನ ಮನೆಯ ಕಡೆಗೆ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಅಂಪಾರು ಮೂಡುಬಗೆ ನಾಗಬನದ ಬಳಿ ರಸ್ತೆಯ ಬಳಿ ನಡೆದುಕೊಂಡು ಬರುತ್ತಿರುವಾಗ ಸಂಜೆ 07-30 ಗಂಟೆಗೆ ಪಿರ್ಯಾದಿದಾರರ ಎದುರಿನಿಂದ ಅಂಪಾರು ಕಡೆಯಿಂದ KA 20 C 269 ನೇ ನಂಬ್ರದ ಮಿನಿ ಟಿಪ್ಪರ್‌ ಲಾರಿಯನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿ0ದ ಚಲಾಯಿಸಿಕೊಂಡು ಆತನ ತೀರ ಬಲ ಬದಿಗೆ ಬಂದು ಪಿರ್ಯಾದಿದಾರರಿಗೆ ಎದುರಿನಿ0ದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆ ಬದಿಯ ಚರಂಡಿಗೆ ಬಿದ್ದು ಬಲಕಾಲಿನ ಮೂಳೆ ಮುರಿತ, ಬಲಕೈಯ ಮಣಿಗಂಟು, ಬಲಭುಜದ ಬಳಿ ಒಳ ಜಖಂಆಗಿದ್ದು ತಲೆಯ ಬಲಭಾಗಕ್ಕೆ ರಕ್ತ ಗಾಯವಾಗಿದ್ದು ಇವರನ್ನು ಚಿಕಿತ್ಸೆ ಬಗ್ಗೆ ಉದಯಶೆಟ್ಟಿ ಹಾಗೂ ಇತರರು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ಚಂದ್ರ ಆಚಾರಿರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 3/2012 ಕಲಂ : 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಹೆಬ್ರಿ: ದಿನಾಂಕ 23/01/2012 ರಂದು ಪಿರ್ಯಾದಿದಾರರಾದ ಸುಬ್ಬಣ್ಣ ನಾಯ್ಕ (60) ಬಿನ್ ದಿ.ಕಾಲು ನಾಯ್ಕ, ವಾಸ: ಪಡುಜೆಡ್ಡು, ಕೊಕ್ಕರ್ಣೆ, ಪೆಜಮಂಗೂರು ಗ್ರಾಮ, ಉಡುಪಿ ತಾಲೂಕು ಇವರು ರಾಮ ನಾಯ್ಕ ಹಾಗೂ ಮಾವ ನರಸಿಂಹ ನಾಯ್ಕ ರವರೊಂದಿಗೆ ತಮ್ಮ ಪರಿಚಯದ ಶೇಖರ ನಾಯ್ಕ ರವರ ಬಾಬ್ತು ಕೆಎ 209069 ನೇ ಆಟೋರಿಕ್ಷಾದಲ್ಲಿ ಕಳ್ತೂರು ಗ್ರಾಮದ ಜುಮ್ಲಾಕ್ರಾಸ್‌ನಿಂದ 1.5 ಕಿ.ಮೀ. ಮುಂದೆ ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 01:00 ಗಂಟೆಗೆ ಉಡುಪಿ ತಾಲೂಕಿನ ಕಳ್ತೂರು ಗ್ರಾಮದ ಹಕ್ಲುಮನೆ ಎಂಬಲ್ಲಿ ತಲುಪುವಾಗ ಸದ್ರಿ ಶೇಖರ ನಾಯ್ಕರವರು ತಮ್ಮ ಬಾಬ್ತು ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತಿರುವಿನ ಬಳಿ ರಿಕ್ಷಾವನ್ನು ಒಮ್ಮಲೇ ತಿರುಗಿಸಿದ ಪರಿಣಾಮ ರಿಕ್ಷಾವು ಮಗುಚಿ ಬಿದ್ದು ಪಿರ್ಯಾದಿದಾರರ ಮಾವ ನರಸಿಂಹ ನಾಯ್ಕರವರು ರಿಕ್ಷಾದ ಅಡಿಗೆ ಬಿದ್ದು ಗಾಯಗೊಂಡಿರುತ್ತಾರೆ. ಸದ್ರಿ ಘಟನೆಯಲ್ಲಿ ಬೇರೆ ಯಾರಿಗೂ ಗಾಯವಾಗಿರುವುದಿಲ್ಲ ಎಂಬುದಾಗಿ ಸುಬ್ಬಣ್ಣ ನಾಯ್ಕ ಇವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 05/12 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಹಿರಿಯಡ್ಕ: ದಿನಾಂಕ 23/01/2012 ರಂದು ಮಧ್ಯಾಹ್ನ 3:45 ಗಂಟೆಗೆ ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಪಕ್ಕಾಲು ಎಂಬಲ್ಲಿ ಹಿರಿಯಡ್ಕ-ಪೆರ್ಡೂರು ರಾಜ್ಯ ರಸ್ತೆಯಲ್ಲಿ ಟಿಪ್ಪರ್ ನಂಬ್ರ ಕೆಎ.19.ಬಿ.8189 ನೇದರ ಚಾಲಕನು ಪೆರ್ಡೂರು ಕಡೆಯಿಂದ ಹಿರಿಯಡ್ಕ ಕಡೆಗೆ ಚಲಾಯಿಸಿಕೊಂಡು ಬರುವಾಗ ಏರಿನಲ್ಲಿ ಚಾಲಕನು ನಿರ್ಲಕ್ಷಿಸಿದ್ದರಿಂದ ಟಿಪ್ಪರ್ ಹಿಮ್ಮುಖವಾಗಿ ಚಲಾಯಿಸಿ ಅದೇ ದಿಕ್ಕಿನಲ್ಲಿ ಮೋಟಾರು ಸೈಕಲ್ ನಂಬ್ರ ಕೆಎ.20.ಯು.7759 ನೇದರಲ್ಲಿ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ಚಂದ್ರಹಾಸ ಶೆಟ್ಟಿಗಾರ (52) ಬಿನ್ ದಿ. ಶೀನ ಶೆಟ್ಟಿಗಾರ, ವಾಸ: ರಾಜೀವ ನಗರ, ಕೊಳಂಬೆ, 5 ಸೆಂಟ್ಸ್ ಬ್ರಹ್ಮಾವರ ಇವರು ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಎಡಕಾಲಿಗೆ ಗಾಯವಾಗಿದ್ದು, ಮೋಟಾರು ಸೈಕಲ್ ಜಖಂಗೊಂಡಿರುತ್ತದೆ ಎಂಬುದಾಗಿ ಚಂದ್ರಹಾಸ ಶೆಟ್ಟಿಗಾರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 07/2012 ಕಲಂ 279, 337, ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: