ಅಪಘಾತ ಪ್ರಕರಣ
- ಮಲ್ಪೆ: ದಿನಾಂಕ 22/01/2012 ರಂದು ಸಂಜೆ 05.00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಮೋಹನ್ ದಾಸ ಕಿಣಿ (69) ಬಿನ್ ದಿ. ಸಂಜೀವ ಕಿಣಿ ವಾಸ ಕಲ್ಮಾಡಿ ಕೊಡವೂರು ಗ್ರಾಮ ಇವರು ಮಲ್ಪೆ ಜಂಕ್ಷನ್ ನಲ್ಲಿರುವ ಅಂಗಡಿಯಿಂದ ಹೊರಗೆ ರಸ್ತೆಗೆ ಬಂದು ರಸ್ತೆಗೆ ಇಳಿದು ನಿಂತಿರುವಾಗ ವಡಭಾಂಡೇಶ್ವರ ಕಡೆಯಿಂದ ಮಲ್ಪೆ ಜಂಕ್ಷನ್ ಕಡೆಗೆ ಕೆಎ 20 6903 ನಂಬ್ರದ ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಎಡಕಾಲಿನ ಪಾದದ ಗಂಟಿನ ಮೇಲ್ಭಾಗದಲ್ಲಿ ಮೂಳೆ ಮುರಿತವಾಗಿದ್ದು, ಬಲಕೈಯಲ್ಲಿ ಚರ್ಮ ತರಚಿದ ಗಾಯಗಳಾಗಿರುತ್ತವೆ ಎಂಬುದಾಗಿ ಮೋಹನ್ ದಾಸ್ ಕಿಣಿ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಧ ಕ್ರಮಾಂಕ 12/2012 ಕಲಂ 279 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
- ಕೋಟಾ: ದಿನಾಂಕ 19/01/2012 ರ ಸಂಜೆ 5:00 ಗಂಟೆಯಿಂದ ದಿನಾಂಕ 23/01/2012 ರ ಸಂಜೆ 4:30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಾದ ಕಲಾವತಿ (52) ಗಂಡ: ಆನಂದರಾಮ ಮಯ್ಯ ವಾಸ: ವೀಣಾ ನಿಲಯ ಹೆಗ್ಗಡ್ತಿ ಓಣಿ ರಸ್ತೆ ಪಾರಂಪಳ್ಳಿ ಗ್ರಾಮ ಉಡುಪಿ ತಾಲೂಕು ಇವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಕಬ್ಬಿಣದ ಆಯುಧದಿಂದ ಒಡೆದು ಮನೆಯ ಒಳಗೆ ಪ್ರವೇಶಿಸಿ ಮನೆ ಒಳಗೆ ಕಪಾಟಿನಲ್ಲಿಟ್ಟಿದ್ದ 1) ಚಿನ್ನದ 2 ಬಳೆ- 26 ಗ್ರಾಂ, 2) ಬೆಳ್ಳಿ ತಂಬಿಗೆ-1, 500 ಗ್ರಾಂ, 3) ಬೆಳ್ಳಿ ಕವಳಿಗೆ ಸೌಟು & 2 ಲೋಟ-300 ಗ್ರಾಂ, ಮತ್ತು ನಗದು ರೂಪಾಯಿ-20,000/-ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ 1,20,000/- ರೂಪಾಯಿ ಆಗಬಹುದು ಎಂಬುದಾಗಿ ಕಲಾವತಿರವರು ನೀಡಿದ ದೂರಿನಂತೆ ಕೋಟಾ ಠಾಣಾ ಅಪರಾಧ ಕ್ರಮಾಂಕ 14/2012 ಕಲಂ 454 457 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
- ಬೈಂದೂರು: ದಿನಾಂಕ: 22/01/2012 ರಂದು ಸಂಜೆ ಸಮಯ ಸುಮಾರು 7:15 ಗಂಟೆಗೆ ನಾಗರಾಜ, (29) ಬಿನ್ ಮಹಾಬಲ ಪೂಜಾರಿ, ವಾಸ:ನೂಜಿನ ಗದ್ದೆ, ಗೊಳಿಹೋಳೆ ಗ್ರಾಮ ಕುಂದಾಪುರ ತಾಲೂಕು ಇವರು ಗೋಳಿಹೊಳೆ ಗ್ರಾಮದ ಅರೆಶಿರೂರು ಬಸ್ಸು ತಂಗುದಾಣದ ಬಳಿ ನಿಂತುಕೊಂಡಿರುವಾಗ ಅವರ ಪರಿಚಯದ ಚುಚ್ಚಿ ಅಸಿಹೊಳೆ ಸೀನಪ್ಪ ಶೆಟ್ಟಿಯವರ ಮಕ್ಕಳಾದ ಸತೀಶ ಶೆಟ್ಟಿ, ಸುಬ್ಬಣ್ಣ ಶೆಟ್ಟಿ ಮತ್ತು ರತ್ನಾಕರ ಪೂಜಾರಿ, ನಾರಾಯಣ ಪೂಜಾರಿ, ವೀರಯ್ಯ ಪೂಜಾರಿ ಎಂಬವರುಗಳು ಅವರು ನಿಂತುಕೊಂಡದ್ದಲ್ಲಿಗೆ ಬಂದು ಅವಾಚ್ಯ ಶಬ್ಧಗಳಿಂದ ಬೈದು ಅವರುಗಳ ಪೈಕಿ ಸತೀಶ ಶೆಟ್ಟಿ ಹಾಗೂ ಸುಬ್ಬಣ್ಣ ಶೆಟ್ಟಿ ಎಂಬವರು ಅವರಿಗೆ ಕೈಯಿಂದ ಹೊಡೆದು ದೂಡಿದ್ದಲ್ಲದೇ, ಜಗಳ ಬಿಡಿಸಲು ಬಂದ ವೀರೇಂದ್ರ ಪೂಜಾರಿ ಎಂಬವರಿಗೆ ಸುಬ್ಬಣ್ಣ ಶೆಟ್ಟಿಯು ಅಲ್ಲಿಯೇ ಅಂಗಡಿಯಲ್ಲಿದ್ದ ಬಾಜಲ್ ಬಾಟ್ಲಿಯನ್ನು ಸತೀಶ್ ಶೆಟ್ಟಿಗೆ ಕೊಟ್ಟು ಸತೀಶ್ ಶೆಟ್ಟಿಯು ಅದೇ ಬಾಟ್ಲಿಯಿಂದ ವೀರೇಂದ್ರ ಪೂಜಾರಿಯ ಹಣೆಗೆ ಹೊಡೆದು ಹಲ್ಲೆ ನಡೆಸಿದ್ದು, ಇದರ ಪರಿಣಾಮ ವೀರೇಂದ್ರ ಪೂಜಾರಿಗೆ ರಕ್ತಗಾಯವಾಗಿರುತ್ತದೆ.. ನಂತರ ಜಗಳ ಬಿಡಿಸಲು ಬಂದ ವಿಜಯ ಮರಾಠಿ ಎಂಬವರಿಗೆ ರತ್ನಾಕರ ಪೂಜಾರಿ, ನಾರಾಯಣ ಪೂಜಾರಿ, ವೀರಯ್ಯ ಪೂಜಾರಿ ಎಂಬವರು ಸೇರಿಕೊಂಡು ಕೈಯಿಂದ ಹಲ್ಲೆ ನಡೆಸಿರುತ್ತಾರೆ. ನಾಗರಾಜ ಇವರಿಗೂ ಹಾಗೂ ರತ್ನಾಕರ ಪೂಜಾರಿ ಎಂಬವರಿಗೂ ಜಾಗದ ತಕರಾರಿದ್ದು, ಅದೇ ದ್ವೇಷದಿಂದ ಈ ಹಲ್ಲೆ ನಡೆಸಿರುವುದಾಗಿದೆ ಎಂಬಿತ್ಯಾದಿ. ಈ ಬಗ್ಗೆ ನಾಗರಾಜ ಇವರ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ: 16/2012 ಕಲಂ 143, 147, 148, 323, 324, 504, ಜತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೇ ಪ್ರಕರಣ :
- ಬೈಂದೂರು : ದಿನಾಂಕ: 19/01/2012 ರಂದು ರಾತ್ರಿ 11-20 ಗಂಟೆಗೆ ಶರತ ಶೆಟ್ಟಿ (25) ತಂದೆ:ಸದಾಶಿವ ಶೆಟ್ಟಿ, ವಾಸ:ಶೀನಪ್ಪ ಶೆಟ್ಟಿ ಹೌಸ್ , ಉಪ್ಪುಂದ ಗ್ರಾಮ ಕುಂದಾಪುರ ತಾಲೂಕು, ಉಪ್ಪುಂದ ಗ್ರಾಮದ ಕಟ್ಕೇರಿ ಎಂಬವರು ತನ್ನ ಮನೆಯಲ್ಲಿರುವಾಗ ಅವರ ಮೊಬೈಲ್ ಫೋನ್‌ಗೆ ಇನ್ನೊಂದು ಮೊಬೈಲ್‌ನಿಂದ ಆಂಗ್ಲ ಭಾಷೆಯಲ್ಲಿ ಒಂದು ಅಶ್ಲೀಲ ಎಸ್‌ಎಮ್‌ಎಸ್ ಬಂದಿದ್ದು ನಂತರ ದಿನಾಂಕ 21/01/2012 ರಂದು ರಾತ್ರಿ 08:48 ಗಂಟೆಗೆ ಅವರ ಸ್ನೇಹಿತರಾದ ಪಾಂಡುರಂಗ ಪಡಿಯಾರ್‌ರವರ ಮನೆಯಲ್ಲಿರುವಾಗ ಅವರ ಮೊಬೈಲ್‌ಗೆ ಇನ್ನೊಂದು ಮೊಬೈಲ್‌ನಿಂದ ತಾನು ಕಾಡಿತ್ತಾರ್ ಸುರೇಶ ಎಂಬುದಾಗಿ ನಮೂದಿಸಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಆಂಗ್ಲ ಭಾಷೆಯಲ್ಲಿ ಒಂದು ಎಸ್‌ಎಂಎಸ್ ಬಂದಿರುತ್ತದೆ. ಶರತ ಶೆಟ್ಟಿರವರು ಸುರೇಶ ಶೆಟ್ಟಿ ಹಾಗೂ ಪಾಂಡುರಂಗ ಪಡಿಯಾರ್ ರವರ ಜೊತೆಗೂಡಿ ಒಂದು ಸಂಸ್ಥೆಯನ್ನು ಆರಂಭಿಸಿದ್ದು ಸದ್ರಿ ಸಂಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಭಾವನೆ ಮೂಡಿಸುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾಗಿರುತ್ತದೆ ಎಂಬುದಾಗಿ ಆರೋಪಿಸಿ ಶರತ ಶೆಟ್ಟಿಯವರು ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ: 17/2012 ಕಲಂ 66(ಎ), 66(ಬಿ) ಐ.ಟಿ. ಕಾಯಿದೆ ಮತ್ತು ಕಲಂ 504, 506, 507 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಕಾರ್ಕಳ: ದಿನಾಂಕ: 24.01.2012 ರಂದು 02:30 ಗಂಟೆಯಿಂದ 06:45 ಗಂಟೆಯ ನಡುವಿನ ಅವಧಿಯಲ್ಲಿ ಕಾರ್ಕಳ ತಾಲೂಕು ಮಾಳ ಗ್ರಾಮದ ಮಲ್ಲಾರು ಎಂಬಲ್ಲಿ ಪಾಂಡುರಂಗ ಜೋಶಿ (54) ತಂದೆ: ಕಾಂತ್ಲ ಅನಂತ ಜೋಶಿ ವಾಸ: ಕಾಂತ್ಲ ಮನೆ, ಮಲ್ಲಾರು ಮಾಳ ಗ್ರಾಮ ಕಾರ್ಕಳ ಇವರ ತಂದೆ ಕೆ. ಅನಂತ ಜೋಶಿ ಪ್ರಾಯ 81 ವರ್ಷ ಇವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯ ಎದುರಿನ ಅಂಗಳದ ಬಳಿ ಇರುವ ಬಾವಿಯ ಅಡ್ಡ ತೋಲೆಗೆ ಬೈರಾಸಿನ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣಾಗಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಪಾಂಡುರಂಗ ಜೋಶಿ ಇವರ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 03/2012. ಕಲಂ. 174 ಸಿ. ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment