Friday, January 27, 2012

Daily Crime Reported on 27/01/2012 at 07:00 Hrs

ಅಪಘಾತ ಪ್ರಕರಣಗಳು

  • ಕಾಪು :ದಿನಾಂಕ. 26/01/2012 ರಂದು ಮಧ್ಯಾಹ್ನ 3:00 ಗಂಟೆಗೆ ಕೊಪ್ಪಲಂಗಡಿ, ಬೀಚ್ ಹೋಗುವ ದಾರಿಯ ಹತ್ತಿರ, ರಾ.ಹೆ 66 ರಲ್ಲಿ ರಘುಪತಿ.ಯಸ್, ಆಚಾರ್ಯ (52 ವರ್ಷ), ತಂದೆ:- ಕೆ. ಶ್ರೀನಿವಾಸ ಆಚಾರ್ಯವಾಸ:- ನಿಸರ್ಗ, ಕೆಮುಂಡೇಲು, ಎಲ್ಲೂರು ಗ್ರಾಮ, ಉಡುಪಿ ತಾಲೂಕುರವರು ಕೆಎ-20-ಪಿ- 2751 ನೇ ಐ 10 ಸ್ಪೋಟ್ಸ್ ಕಾರಿನಲ್ಲಿ ಉಡುಪಿಯಿಂದ ಹೋಗುತ್ತಿದ್ದಾಗ ಒಂದು ಕಾರು ಬೀಚ್ ಕಡೆಗೆ ಹೋಗುತ್ತಿದ್ದಾಗ ಕಾರಿನ ಎದುರುನಲ್ಲಿದ್ದ ಕೆಎ-19-ಬಿ- 3493 ನೇ ಲಾರಿ ಚಾಲಕನು ಇಂಡಿಕೇಟರ್ ಲೈಟ್ ಹಾಕಿ ನಿಲ್ಲುವ ಸೂಚನೆ ನೀಡಿ ಲಾರಿಯನ್ನು ನಿಲ್ಲಿಸಿದ್ದು, ರಘುಪತಿ.ಯಸ್, ಆಚಾರ್ಯರವರು ಕೂಡ ತನ್ನ ಕಾರನ್ನು ಇಂಡಿಕೇಟರ್ ಲೈಟ್ ಹಾಕಿ ನಿಲ್ಲುವ ಸೂಚನೆ ನೀಡಿ ನಿಲ್ಲಿಸಿದ್ದು, ಅದೇ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-25-ಎ-6057 ನೇ ಲಾರಿ ಚಾಲಕನಾದ ಆರೋಪಿ ಕೃಷ್ಣಪ್ಪ ಲಾರಿಯನ್ನು ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿ ರಘುಪತಿ.ಯಸ್, ಆಚಾರ್ಯರವರು ನಿಲ್ಲಿಸಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಮುಂದೆ ಚಲಿಸಿ ಮುಂದೆ ನಿಂತಿದ್ದ ಲಾರಿಯ ಹಿಂಬದಿಗೆ ತಾಗಿ ಕಾರಿನ ಎದುರು ಮತ್ತು ಹಿಂಬದಿ ಜಖಂ ಗೊಂಡಿರುತ್ತದೆ. ಯಾರಿಗೂ ಗಾಯವಾಗಿರುವುದಿಲ್ಲ ಎಂಬುದಾಗಿ ರಘುಪತಿ.ಯಸ್, ಆಚಾರ್ಯರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/12 ಕಲಂ 279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಣಿಪಾಲ :ದಿನಾಂಕ 26/01/2012 ರಂದು ಸೀತಾ ರಾಮ ಆಚಾರ್ಯ(32), ತಂದೆ: ಕೃಷ್ಣ ಆಚಾರ್ಯ, ವಾಸ: ಪಂಚಮ ಶ್ರೀ ನಿಲಯ, ಮಂಚಿ ಕೋಡಿ ಪೋಸ್ಟ್‌, ಕುಂಜಿಬೆಟ್ಟು, ಶಿವಳ್ಳಿ ಗ್ರಾಮ, ಉಡುಪಿರು ತನ್ನ ತಾಯಿ ಗುಲಾಬಿ ಆಚಾರ್ತಿರವರೊಂದಿಗೆ ಅಗತ್ಯ ಕೆಲಸದ ಬಗ್ಗೆ ಪರ್ಕಳಕ್ಕೆ ಒಂದು ಕೆಲಸ ಮುಗಿಸಿ ಉಡುಪಿಗೆ ಬರುವರೆ ಪರ್ಕಳ ಸರ್ಕಲ್‌ನಿಂದ ಬಸ್‌ ನಿಲ್ದಾಣ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯಾಹ್ನ 11:30 ಗಂಟೆ ಸಮಯಕ್ಕೆ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಚೆವರ್‌ಲೆಟ್‌ ಕಾರು ನಂಬ್ರ ಕೆಎ 20 ಎನ್‌ 6729ನೇದನ್ನು ಅದರ ಚಾಲಕನು ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೀತಾ ರಾಮ ಆಚಾರ್ಯರವರ ತಾಯಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಾಯಿ ಮಣ್ಣು ರಸ್ತೆಗೆ ಬಿದ್ದು, ಅವರ ಬಲ ಕಾಲಿಗೆ ತೀವೃ ತರಹದ ಮುಳೆ ಮುರಿತ ಗಾಯವಾಗಿರುವುದಾಗಿದೆ ಎಂಬುದಾಗಿ ಸೀತಾರಾಮ ಆಚಾರ್ಯ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 26/12 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪರಿಚಿತ ಶವ ಪತ್ತೆ- ಕೊಲೆ ಪ್ರಕರಣ
  • ಪಡುಬಿದ್ರಿ :ಜೀವನ್ ಕುಮಾರ್ (37 ವರ್ಷ) ತಂದೆ: ಭಾಸ್ಕರ ಶೆಟ್ಟಿ ವಾಸ:ಅವರಾಲು ತಿರ್ಟೋಟ್ಟು ಹೌಸ್,ಅವರಾಲು ಮಟ್ಟು, ಅಂಚೆ ಮತ್ತು ಗ್ರಾಮ ಫಲಿಮಾರು, ಉಡುಪಿರವರು ಸಿನ್‌ಫ್ರಾ ಕಂಪೆನಿಯಲ್ಲಿ ಸೆಕ್ಯುರಿಟಿ ಆಫೀಸರ್ ಆಗಿದ್ದು, ದಿನಾಂಕ 26.01.12 ರಂದು ಮದ್ಯಾಹ್ನ 3 ಘಂಟೆ ಸುಮಾರಿಗೆ ಸಿನೆಪ್ರಾ ಕಂಪೆನಿಗೆ ಸೇರಿದ ಜಾಗದಲ್ಲಿ ಜೋರಾಗಿ ದುರ್ನಾತ ಬರುತ್ತಿರುವುದನ್ನು ಗಮನಿಸಿ ಅದನ್ನು ಹುಡುಕುತ್ತಾ ಹೋದಾಗ ಎರಡು ಕಡೆ ಗೋಣಿ ಚೀಲದಲ್ಲಿ ರುಂಡ ಮುಂಡ ಬೇರ್ಪಡಿಸಿದ ಸ್ಥಿತಿಯಲ್ಲಿ ಯಾವುದೋ ಹೆಣ್ಣಿನ/ಯುವತಿಯ ದೇಹದ ಭಾಗಗಳು ಪತ್ತೆಯಾಗಿರುತ್ತದೆ.ನೋಡಲಾಗಿ ಒಂದು ಗೋಣಿ ಚೀಲದಲ್ಲಿ ಕುತ್ತಿಗೆಯಿಂದ ಕೆಳಗೆ ಸೊಂಟದ ತನಕದ ಭಾಗಗಳಿದ್ದು ಕೈಗಳನ್ನು ಕಟ್ಟಿದ್ದು,ಅಲ್ಲದೇ ಒಂದು ಸಣ್ಣ ತೊಟ್ಟೆಯಲ್ಲಿ ಕರುಳನ್ನು ಕಟ್ಟಿರುವುದಲ್ಲದೇ ಮತ್ತೊಂದು ಗೋಣಿ ಚೀಲದಲ್ಲಿ ಸೊಂಟದಿಂದ ಕೆಳಭಾಗದ ಭಾಗಗಳಿದ್ದು, ಕಾಲುಗಳನ್ನು ಮಡಚಿ ತುಂಬಿರುವುದು ಕಂಡುಬಂದಿರುತ್ತದೆ. ತಲೆಭಾಗ ಕಂಡು ಬಂದಿರುವುದಿಲ್ಲ. ಯಾರೋ ದುಷ್ಕರ್ಮಿಗಳು ಯಾರೋ ಹೆಂಗಸು/ಯುವತಿಯನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ದೇಹವನ್ನು ತುಂಡು ತುಂಡು ಮಾಡಿ ಸುಮಾರು 4- 5 ದಿನಗಳ ಹಿಂದೆ ಕಂಪೆನಿಗೆ ಸಂಬಂಧಿಸಿದ ಜಾಗದಲ್ಲಿ ಎಸೆದಿರುವುದಾಗಿದೆ. ಎಂಬುದಾಗಿ ಜೀವನ್ ಕುಮಾರ್ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/12 ಕಲಂ 302, 201 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಖಾಸಗಿ ದೂರು ದಾಖಲು
  • ಉಡುಪಿ :ಪ್ರಮೀಳಾ(28), ಗಂಡ: ಪ್ರೇಮಾನಂದ ಕಲ್ಮಾಡಿ, ವಾಸ: ಶಾಂತವನ, ಬನ್ನಂಜೆ, ಮೂಡನಿಡಂಬೂರು ಗ್ರಾಮ, ಉಡುಪಿರವರು ದಿನಾಂಕ 02-12-01ರಂದು ಆಪಾದಿತ ಪ್ರೇಮಾನಂದ ಕಲ್ಮಾಡಿ, ತಂದೆ: ಶಾಂತರಾಮ ಕಲ್ಮಾಡಿ ವರನ್ನು ಹಿಂದೂ ಸಂಪ್ರಾಯದಂತೆ ಮಹಾಲಿಂಗೇಶ್ವರ ದೇವಸ್ಥಾನ ಶಿರ್ವಾದಲ್ಲಿ ಮದುವೆಯಾಗಿದ್ದು, ಮದುವೆಯ ನಂತರ ಗಂಡನ ಮನೆಯಲ್ಲಿ ಜೀವಿಸುತ್ತಿದ್ದು, ಅವರ ದಾಂಪತ್ಯ ಜೀವನದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿರುತ್ತದೆ. ಆಪಾದಿತ ಪ್ರೇಮಾನಂದ ವರು ವಿಪರೀತ ಮದ್ಯ ಸೇವನೆ ಮತ್ತು ಧೂಮಪಾನ ಮತ್ತು ಜುಗಾರಿ ಆಡುವ ದುಷ್ಚಟಗಳಿಂದ ತಾನು ಸಂಪಾದಿಸುವ ಪೂರ್ತಿ ಹಣವನ್ನು ವ್ಯಯ ಮಾಡುತ್ತಿದ್ದು, ಆತನಲ್ಲಿ ಹಣದ ಕೊರತೆ ಆದ ನಂತರ ಎಲ್ಲರಲ್ಲಿಯೂ ಸಾಲ ಮಾಡುತ್ತಿದ್ದು, ಪಿರ್ಯಾದಿದಾರರ ಹೆಸರಿನಲ್ಲಿ ಸ್ವಸಹಾಯ ಸಂಘದಿಂದ 15000/-ರೂ, ಮಹಿಳಾ ಗ್ರಾಹಕರ ಸಂಘದಿಂದ 10,000/-, ಎಂ.ಐ.ಟಿ ಶಿಕ್ಷಕಿ ಅನುಪಮರವದಿಂದ 20000/- ಸಾಲವನ್ನು ಪಡೆದಿದ್ದಲ್ಲದೆ ಪಿರ್ಯಾದಿದಾರರ 5 ಪವನ್‌ ಚಿನ್ನವನ್ನು 32000/-ರೂಗೆ ಬ್ಯಾಂಕಿನಲ್ಲಿ ಅಡವು ಹಾಕಿರುತ್ತಾನೆ. ಆಪಾದಿತ ಪ್ರೇಮಾನಂದ ರವರು ದಿನಾ ರಾತ್ರಿ ಪಾನಮತ್ತನಾಗಿ ಬಂದು ಪಿರ್ಯಾದಿದಾರರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದುಲ್ಲದೆ ಇನ್ನು ಹೆಚ್ಚಿನ ಸಾಲವನ್ನು ಪಿರ್ಯಾದಿದಾರರ ಹೆಸರಿನಲ್ಲಿ ತೆಗೆಯುವಂತೆ ಒತ್ತಾಯ ಮಾಡುತ್ತಿದ್ದು, ವಿನಾ ಕಾರಣ ಪಿರ್ಯಾದಿದಾರರಿಗೆ ಅಚಾವ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾನೆ.ದಿನಾಂಕ 15-01-12ರಂದು ರಾತ್ರಿ 8:30ಗಂಟೆಗೆ ಆಪಾದಿತರುಗಳಾದ ಪ್ರೇಮಾನಂದ ಕಲ್ಮಾಡಿ, ತಂದೆ: ಶಾಂತರಾಮ ಕಲ್ಮಾಡಿ, , ಬನ್ನಂಜೆ, ಸದಾನಂದ, ತಂದೆ: ಶಾಂತರಮ ಕಲ್ಮಾಡಿ, ಕಿನ್ನಿಮೂಲ್ಕಿ, ಜಯಂತಿ, ಗಂಡ: ಸದಾನಂದ, ಕಿನ್ನಿಮೂಲ್ಕಿರವರುಗಳು ಪಿರ್ಯಾದಿದಾರರ ಹೆಸರಿನಲ್ಲಿ ಹೆಚ್ಚಿನ ಸಾಲವನ್ನು ತೆಗೆಯ ಬೇಕೆಂದೂ ಅದಕ್ಕೆ ಒಪ್ಪದಿದ್ದಲ್ಲಿ ಪ್ರೇಮಾನಂದ ವರಿಗೆ ಬೇರೆ ಮದುವೆ ಮಾಡುವುದಾಗಿ ಹೇಳಿದಲ್ಲದೆ ಪಿರ್ಯಾದಿದಾರರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ ಈ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದಿ ನಂ.5/12 ರಂತೆ ದೂರು ಸಲ್ಲಿಸಿದ್ದು ಅದರಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/12 ಕಲಂ 498 (ಎ) 506 (2), 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: