Thursday, January 26, 2012

Daily Crime Reported on 26/01/2012 at 19:30 Hrs

ಕಳವು ಪ್ರಕರಣ

  • ಬ್ರಹ್ಮಾವರ :ದಿನಾಂಕ 25/01/2012 ರಂದು ಸಂಜೆ 5.30 ಗಂಟೆಯಿಂದ ದಿ.26/01/2012 ರಂದು ಬೆ.10.00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಚ್ಚೂರು ಗ್ರಾಮದ ಸಂತೆಗುಡ್ಡೆ ಎಂಬಲ್ಲಿರುವ ಬಾರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಎದುರಿನ ಕಿಟಕಿಯ ಎರಡು ಸರಳುಗಳನ್ನು ತುಂಡರಿಸಿ ಒಳಪ್ರವೇಶಿಸಿ ಗ್ಯಾಸ್‌‌ ಕಟ್ಟರ್‌‌ ಮೂಲಕ ಸೇಪ್‌‌ ರೂಮ್‌‌ನ ಬಾಗಿಲಿನ ಒಂದು ಬೀಜಗ್ರಿಯನ್ನು ತುಂಡು ಮಾಡಿ ಕಳವು ಮಾಡಲು ಪ್ರಯತ್ನಿಸಿದ್ದಾಗಿರುತ್ತದೆ ಎಂಬುದಾಗಿ ಬಿ ಕೃಷ್ಣಮೂರ್ತಿ ರಾವ್‌‌ ತಂದ:ದಿ ಕಳಿಂಗಯ್ಯ ವಾಸ:ಕಚ್ಚೂರು ಪಳ್ಳಿಗುಡ್ಡೆ, ಬಾರ್ಕೂರು ಪೋಸ್ಟ್‌‌ ಕಚ್ಚೂರು ಉಡುಪಿ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/12 ಕಲಂ 457,511 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಕೋಟ :ದಿನಾಂಕ 25/01/2012 ರಂದು ಸಂಜೆ 07.30 ಗಂಟೆಗೆ ತಿಮ್ಮ (37 ವರ್ಷ) ತಂದೆ:ಮುತ್ತ, ವಾಸ: ಹಾಲಾಡಿ ಪೆಟ್ರೋಲ್ ಬಂಕ್ ಹತ್ತಿರ, ಹಾಲಾಡಿ, ಕುಂದಾಪುರ ತಾಲೂಕುರವರು ತನ್ನ ತಂಗಿಯರ ಜೊತೆಯಲ್ಲಿ ಮನೆಗೆ ಹೋಗುವರೇ ಹಳ್ಳಾಡಿ ಬಸ್ ನಿಲ್ದಾಣದಲ್ಲಿ ಶ್ರೀ ದುರ್ಗಾಂಬಾ ಬಸ್ಸಿನ ಮುಂಭಾಗದ ಬಾಗಿಲಿನಿಂದ ಹತ್ತುತ್ತಿರುವಾಗ ಬಸ್ಸಿನ ಮುಂಭಾಗದ ಬಾಗಿಲಿನಿಂದ ಇಳಿಯುತ್ತಿದ್ದ ಹಾಲಾಡಿ ರಿಕ್ಷಾ ಚಾಲಕ ಸತೀಶ ಎಂಬುವನುಅವರನ್ನು ಹಾಗೂ ಅವರ ತಂಗಿಯನ್ನು ತಳ್ಳಿಕೊಂಡು ಕೆಳಕ್ಕೆ ಇಳಿದು ಬಂದಿದ್ದು, ಆಗ ಪಿರ್ಯಾದಿದಾರರು ಆತನಲ್ಲಿ ಯಾಕೆ ದೂಡಿಕೊಂಡು ಬಂದಿದ್ದು ಎಂದು ಕೇಳಿದ್ದಕ್ಕೆ ಆರೋಪಿಯು ತನ್ನ ಕೈಯಿಂದ ಪಿರ್ಯಾದಿದಾರರ ಅಂಗಿಯನ್ನು ಎಳೆದು ಕೆಳಕ್ಕೆ ಬೀಳಿಸಿ ರಸ್ತೆಯ ಬದಿಯಲ್ಲಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಮೈಗೆಲ್ಲಾ ಗುದ್ದಿ ಕಾಲಿನಿಂದ ತುಳಿದು ಅವಾಚ್ಯ ಶಬ್ದಗಳಿಂದ ಬೈದು ಮುಂದೆ ನನ್ನ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ತಿಮ್ಮರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2012 ಕಲಂ 323, 324, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಮಲ್ಪೆ :ದಿನಾಂಕ: 26.01.2012 ರಂದು ಸುರೇಂದ್ರ ಬಂಗೇರ (36) ತಂದೆ: ಚಂದಪ್ಪ ತಿಂಗಳಾಯ ವಾಸ: ಆಶಾ ನಿಲಯ ಬಡಾನಿಡಿಯೂರು ಗ್ರಾಮರವರ ಚಿಕ್ಕಮ್ಮನ ಮಗನಾದ ಸುರೇಂದ್ರ ಎಂಬುವರಿಗೆ ಬೆಳಿಗ್ಗೆ 04:00 ಗಂಟೆ ಸಮಯದಲ್ಲಿ ಅವರಿಗೆ ಮೊದಲಿನಿಂದಲೂ ಇದ್ದ ಅಸ್ತಮಾ ಕಾಯಿಲೆಯು ಉಲ್ಬಣಗೊಂಡಿದ್ದರಿಂದ ಮನೆಯವರೆಲ್ಲರೂ ಅವರನ್ನು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ಕೊಂಡು ಹೋಗಿದ್ದು, ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ದಾರಿಯ ಮಧ್ಯೆಯಲ್ಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಎಂಬುದಾಗಿ ಸುರೇಂದ್ರ ಬಂಗೇರ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಯು.ಡಿಆರ್.ನಂ. 06/2011 ಕಲಂ. 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
  • ಮಣಿಪಾಲ್ :ದಿನಾಂಕ 25.01.2012 ರಂದು 11:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮ ಮಣಿಪಾಲದ ಕುಂಡೆಲ್‌ಗುಡ್ಡೆ ಎಂಬಲ್ಲಿ ಕಾಮಗಾರಿ ನಡೆಯುತ್ತಿದ್ದ ಶ್ರೀ ಸಾಯಿ ಶ್ರೀರಾಮ್‌ ಕಟ್ಟಡದ 3 ನೇ ಮಹಡಿಯಿಂದ ಅಬ್ಬಾಸ್‌ ಅನ್ಸಾರಿ (18 ವರ್ಷ) ಎಂಬವರು ಆಕಸ್ಮಾತಾಗಿ ಕಾಲು ಜಾರಿ ಬಿದ್ದಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಸದ್ರಿಯವರು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 26.01.2012 ರಂದು ಬೆಳಿಗ್ಗೆ 09:30 ಗಂಟೆಗೆ ಮೃತಪಟ್ಟಿದ್ದಾಗಿದೆ ಎಂಬುದಾಗಿ ಶರಾಫತ್ ಅನ್ಸಾರಿರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯು.ಡಿಆರ್.ನಂ. 04/2011 ಕಲಂ. 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಹೆಬ್ರಿ :ಶಿಪುರ ಗ್ರಾಮದ ಕಲ್ಮುಂಡ ಎಂಬಲ್ಲಿ ಕಟ್ಟಡ ಕಾಮಗಾರಿಯು ನಡೆಯುತ್ತಿದ್ದು, ದಿನಾಂಕ: 26.01.2012 ರಂದು ಬೆಳೆಗ್ಗೆ 09:00 ಗಂಟೆಗೆ ಕೆಲಸ ಮಾಡಿಕೊಂಡಿದ್ದ ನಾಗಮ್ಮ ಎಂಬುವರು ಆವರಣವಿಲ್ಲದ ಬಾವಿಗೆ ನೀರು ತರಲು ಹೋಗಿದ್ದು, ಮಧ್ಯಾಹ್ನ 12:00 ಗಂಟೆಯಾದರೂ ಮರಳಿ ಬಾರದ ಕಾರಣ ಬಾವಿಯ ಬಳಿ ನೋಡಿದಾಗ, ಬಾವಿಯ ಬದಿಯಲ್ಲಿ ಮಣ್ಣು ಜಾರಿದ ಗುರುತು ಕಂಡು ಬಂದು, ಬೇರೆ ಕೆಲಸಗಾರರನ್ನು ಬಾವಿಯಲ್ಲಿ ಇಳಿಸಿ ನೋಡಿದಾಗ ನಾಗಮ್ಮಳ ಮೃತ ದೇಹ ಪತ್ತೆಯಾಗಿರುತ್ತದೆ. ಮೃತ ನಾಗಮ್ಮಳು ಬಾವಿಯಿಂದ ಕೊಡಪಾನದಲ್ಲಿ ನೀರು ತೆಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಸಂಜಯ್ ಸೇರಿಗಾರ್(34) ತಂದೆ: ಸುಧಾಕರ್ ಸೇರಿಗಾರ್ ಸಾಂತಾರು ದರ್ಖಾಸು ಹರಿಖಂಡಿಗೆ ಬೈರಂರಳ್ಳಿ ಗ್ರಾಮ, ಉಡುಪಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಯು.ಡಿಆರ್.ನಂ. 03/2011 ಕಲಂ. 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

0 comments: