ಅಪಘಾತ ಪ್ರಕರಣ
- ಶಿರ್ವಾ: ದಿನಾಂಕ 26/01/2012 ರಂದು ಪುರುಷೋತ್ತಮ ಯು (29) ಬಿನ್ ಜನಾರ್ದನ ಯು ವಾಸ ಕೇದಾರ್ ಉದ್ಯಾವರ ಗ್ರಾಮ, ಉಡುಪಿ ತಾಲೂಕು ಎಂಬವರು ಓಮಿನಿ ಕೆ ಎ 20 ಎಮ್ 6206 ರಲ್ಲಿ ಶಿರ್ವ ಪಂಜಿಮಾರಿನ ಅಲ್ಪೋನ್ಸ್ ಪಿಂಟೋ ಮತ್ತು ಅವರ ಮನೆಯವರಾದ ರೇಶ್ಮ ಮರಿಯಾ ಪಿಂಟೋ ಮತ್ತು ಐರಿನ್ ಡಿ ಸೋಜ ಎಂಬವರೊಂದಿಗೆ ಅತ್ತೂರು ಜಾತ್ರೆಗೆ ಹೋಗುತ್ತಿರುವಾಗ ಬೆಳಿಗ್ಗೆ 9:00 ಗಂಟೆಗೆ ಶಿರ್ವ ಗ್ರಾಮದ ರಾಬಿನ್ ಬಸ್ಸು ಸ್ಟಾಪಿನ ಬಳಿ ಬೆಳ್ಮಣ್ಣ್ ಕಡೆಯಿಂದ ಕಟಪಾಡಿ ಕಡೆಗೆ ಗೋಡ್ಸ್ ಟೆಂಪೋ ಕೆಎ 20 7737 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತ ತಿರುವಿನಲ್ಲಿ ಬಲ ಬದಿಗೆ ಚಲಾಯಿಸಿ ಓಮಿನಿಗೆ ಡಿಕ್ಕಿ ಹೊಡೆದ ಪರಿಣಾಮ ಓಮಿನಿ ಜಖಂಗೊಂಡು ಪುರುಷೋತ್ತಮ ರವರಿಗೆ ಬಲ ಕೈಗೆ ತರಚಿದ ಗಾಯವಾಗಿದ್ದು, ರೇಶ್ಮ ಮರಿಯಾ ಪಿಂಟೋ ರವರಿಗೆ ತಲೆಗೆ ರಕ್ತ ಗಾಯವಾಗಿದ್ದು, ಐರಿನ್ ಡಿ ಸೋಜ ರವರಗೆ ತಲೆಗೆ ಮತ್ತು ಬಲ ಕಾಲಿಗೆ ಒಳ ಜಖಂವಾಗಿರುತ್ತದೆ ಎಂಬುದಾಗಿ ಪುರುಷೋತ್ತಮ ಯು ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2012 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಮಣಿಪಾಲ :ದಿನಾಂಕ 25.01.2012 ರಂದು 16:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಎಂ.ಐ.ಟಿ ಕ್ಯಾಂಪಸ್‌ನಲ್ಲಿ ಸೌಮನ್ ಭಕ್ತ (21), ತಂದೆ: ಜಿ. ಭಕ್ತ ಬ್ರೆಸೆನಟಿ, ವಾಸ: ರೂಂ ನಂ: 178, 9ನೇ ಬ್ಲಾಕ್, ಎಂಐಟಿ ಹಾಸ್ಟೆಲ್, ಮಣಿಪಾಲ, ಉಡುಪಿ ತಾಲೂಕುರವರು ನಡೆದುಕೊಂಡು ಹೋಗುತ್ತಿರುವಾಗ ಕೆಎ 20 ಎ 9360 ನೇ ಆಟೋರಿಕ್ಷಾ ಚಾಲಕನು ತನ್ನ ರಿಕ್ಷಾವನ್ನು ಸೌಮನ್ ಭಕ್ತರವರ ಹತ್ತಿರದಿಂದ ಡಿಕ್ಕಿ ಹೊಡೆಯುವ ರೀತಿಯಲ್ಲಿ ಚಲಾಯಿಸಿಕೊಂಡು ಹೋದುದರಿಂದ ಸೌಮನ್ ಭಕ್ತ ರವರು ಆಪಾದಿತನಿಗೆ ಜಾಗೃತೆಯಿಂದ ಚಲಾಯಿಸಿ ಎಂದು ಹೇಳಿದ್ದಕ್ಕೆ ಆಪಾದಿತ ರಿಕ್ಷಾ ಚಾಲಕನು ರಿಕ್ಷಾವನ್ನು ನಿಲ್ಲಿಸಿ, ಸೌಮನ್ ಭಕ್ತರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು, ನೀನು ಇನ್ನೂ 2-3 ವರ್ಷಗಳ ಕಾಲ ಮಣಿಪಾಲದಲ್ಲಿ ಇರಬೇಕು, ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಸೌಮನ್ ಭಕ್ತ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2012 ಕಲಂ: 323, 324, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಶಂಕರನಾರಾಯಣ: ದಿನಾಂಕ 25/01/2012 ರಂದು 15:30 ಗಂಟೆಗೆ ಶ್ರೀಮತಿ ಜ್ಯೋತಿ (28) ಗಂಡ ಭಾಸ್ಕರ ವಾಸ: ಕಾಸನಕಟ್ಟೆ ಮೇಲ್ಜೆಡ್ಡು ಸಿದ್ದಾಪುರ ಗ್ರಾಮ, ಕುಂದಾಪುರ ತಾಲೂಕು ಎಂಬವರು ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಸಿದ್ದಾಪುರ ಮೇಲ್ಜೆಡ್ಡು ಎಂಬಲ್ಲಿರುವ ಆರೋಪಿ ವನಜಶೆಡ್ತಿ ಎಂಬವರ ಅಂಗಡಿಗೆ ಹೋಗಿ ನಿಮ್ಮ ಸೋಪು ವಾಪಾಸು ತೆಗೆದುಕೊಳ್ಳಿ ನನ್ನ ಹಣ ಕೊಡಿ ಎಂದು ಹೇಳಿದಾಗ ವನಜಶೆಡ್ತಿ ರವರು ಹಣವನ್ನು ವಾಪಾಸು ತೆಗೆದುಕೊಳ್ಳಲು ನಿರಾಕರಿಸಿ ಅವಾಚ್ಯ ಶಬ್ದಗಳಿಂದ ಬೈದು, ದೂಡಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಅಂಗಡಿಯ ಮೂಲೆಯಲ್ಲಿದ್ದ ಗಾರೆ ಕೆಲಸ ಮಾಡುವ ಕೈಮಣಿ ಮರದ ಸಾಧನದಿಂದ ಹಾಗೂ ಖಾಲಿ ಬಾಜಲ್ ಬಾಟಲಿಯಿಂದ ಶ್ರೀಮತಿ ಜ್ಯೋತಿ ರವರಿಗೆ ಹಲ್ಲೆ ನಡೆಸಿ, ಇನ್ನೊಮ್ಮೆ ನನ್ನ ಅಂಗಡಿಯ ಬಳಿ ಬಂದರೆ ನಿನ್ನ ಕೈಕಾಲನ್ನು ಮುರಿದು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಶ್ರೀಮತಿ ಜ್ಯೋತಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2012 ಕಲಂ 504, 324, 506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಶಿರ್ವಾ :ದಿನಾಂಕ 25-01-2012 ರಂದು ರಾತ್ರಿ 19-25 ಗಂಟೆ ಗೆ ರಿಚಡ್ ಪೆರ್ನಾಂಡಿಸ್, ತಂದೆ : ಇಗ್ನೇಶಿಯಸ್ ಫೆರ್ನಾಂಡಿಸ್, ವಾಸ ಪಾಲಮೆ ದರ್ಖಾಸು ಶಿರ್ವರವರು ತನ್ನ ಹೆಂಡತಿಯ ತಮ್ಮ ಆನಿಲ್ ನೋರಾಹ್ನ ಎಂಬವರ ಜೊತೆಗೆ ಪಾಲಮೆ ದರ್ಖಾಸು ಎಂಬಲ್ಲಿ ಜೀಪಿನಲ್ಲಿ ಬರುತ್ತಿರುವಾಗ ಆರೋಪಿ ಪ್ರವೀಣ ಪೆರ್ನಾಂಡಿಸನು ಜೀಪು ಹಿಂದಕ್ಕೆ ಹೋಗದಂತೆ ಟೆಂಪೋ ಅಡ್ಡ ಇಟ್ಟು ಜೀಪನ್ನು ಮುಂದಕ್ಕೆ ಚಲಾಯಿಸಿಕೊಂಡು ಬರುವಾಗ ಆರೋಪಿ ಶ್ರೀಮತಿ ಲಿಂಡ ಪೆರ್ನಾಂಡಿಸ್ ಜೀಪಿನ ಒಳಗೆ ಕೈ ಹಾಕಿ ಜೀಪಿನ ಕೀ ತೆಗೆಯಲು ಪ್ರಯತ್ನಿಸಿ ಚಾಲಕ ಆನಿಲ ಕೈಗೆ ಪರಿಚಿ ಗಾಯಗೊಳಿಸಿದ್ದು, ಗಲಾಟೆ ಕೇಳಿ ಅಲ್ಲಿಗೆ ಬಂದ ಪಿರ್ಯಾದಿದಾರರ ಮಗಳು ರೋಸಿಟಾ ಎಂಬವರಿಗೆ ಪ್ರವೀಣನು ಕೆನ್ನೆಗೆ ಹೊಡೆದು , ಮೈ- ಕೈ ಗೆ ಪರಿಚಿ ಗಾಯಗೊಳಿಸಿರುತ್ತಾನೆ. ಆರೋಪಿ ಹೆರಿಕ್ ಫೆರ್ನಾಂಡಿಸ್ ಪಿರ್ಯಾದಿದಾರರ ಕೆನ್ನೆಗೆ ಕೈ ಯಿಂದ ಹೊಡೆದು ಗಾಯಗೊಳಿಸಿದ್ದು , ರೋಸಿಟಾಗೆ ಅವಾಚ್ಯ ಶಬ್ದಗಳಿಂದ ಬೈದು ಮೈ ಮೇಲೆ ಕೈ ಹಾಕಿ ಮಾನಭಂಗ ಮಾಡಿರುತ್ತಾನೆ ಅಲ್ಲದೆ ಕೊಲ್ಲದೆ ಬಿಡುವುದಿಲ್ಲವಾಗಿ ಜೀವ ,ಬೆದರಿಕೆ ಹಾಕಿರುತ್ತಾನೆ. ಈ ಘಟನೆಗೆ ಜಾಗ ವಿವಾದವೇ ಕಾರಣವಾಗಿರುತ್ತದೆ. ಎಂಬುದಾಗಿ ಶ್ರೀಮತಿ.ಲಿಂಡಾ ಪೆರ್ನಾಂಡಿಸ್ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 8/2012 ಕಲಂ 323,354,504,506, ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಶಿರ್ವಾ :ದಿನಾಂಕ 25/01/2012 ರಂದು 19:30 ಗಂಟೆಗೆ ಶ್ರೀಮತಿ.ಲಿಂಡಾ ಪೆರ್ನಾಂಡಿಸ್ (37) ಗಂಡ ಮೆಲ್ವೀನ್ ಫೆರ್ನಾಂಡಿಸ್ ಹೆಳೆ ಹಿತ್ಲು ಶಿರ್ವರವರು ಅವರ ಮನೆಗೆ ಬರುವ ದಾರಿಯಲ್ಲಿ ನೆರೆಮನೆಯ ಅನಿತಾ ಎಂಬವರ ತಮ್ಮ ಅನಿಲ್ ಎಂಬಾತನು ಜೀಪು ಚಲಾಯಿಸಿಕೊಂಡು ಬರುತ್ತಿದ್ದಾಗ ನೀನು ಎಲ್ಲಿಗೆ ಹೋಗುತ್ತಿ ಎಂದು ಕೇಳಿದಕ್ಕೆ ಆತನು ನೀನು ಯಾರು ಕೇಳುವವಳು ಎಂದು ಮೊಣ ಕಾಲಿನಿಂದ ಪಿರ್ಯಾದಿದಾರರ ಹೊಟ್ಟೆಯ ಕೆಳಗೆ ತುಳಿದು ಜಖಂ ಗೊಳಿಸಿದ್ದು ಜೀಪಿನಲ್ಲಿ ಇದ್ದ ರಿಚರ್ಡ್ ಫೆರ್ನಾಂಡಿಸ್ ಎಂಬವರು ಫಿರ್ಯಾದಿದಾರರ ಮೈ ಮೇಲೆ ಕೈ ಹಾಕಿ ಮಾನಭಂಗ ಉಂಟು ಮಾಡಿದ್ದು, ನಂತರ ಅಲ್ಲಿಗೆ ಬಂದ ಅನಿತಾ ಫೆರ್ನಾಂಡಿಸ್, ಮತ್ತು ಅವರ ಮಗಳು ರೊಸಿಟಾ ಫೆರ್ನಾಂಡಿಸ್ ಕೈಯಿಂದ ಹೊಡೆದು ,ಮಗ ರಾಜೇಶ ಫೆರ್ನಾಂಡಿಸ್ ಎಂಬಾತನು ಪಿರ್ಯಾದಿದಾರರ ಕುತ್ತಿಗೆ ಒತ್ತಿ ಹಿಡಿದಿರುತ್ತಾರೆ. ಇವರಲ್ಲಾ ಅಕ್ರಮ ಕೂಟ ಸೇರಿಕೊಂಡು ಫಿರ್ಯಾದಿದಾರರಿಗೆ ಹಲ್ಲೆ ಮಾಡಿರುತ್ತಾರೆ. ಇದರ ಪರಿಣಾಮ ಪಿರ್ಯಾದಿದಾರರ ಹೊಟ್ಟೆಯ ಕೆಳಗೆ ಒಳ ಜಖಂ ಆಗಿದ್ದು ಈ ಘಟನೆಗೆ ಜಾಗ ವಿವಾದವೇ ಕಾರಣವಾಗಿರುತ್ತದೆ ಎಂಬುದಾಗಿ ಶ್ರೀಮತಿ.ಲಿಂಡಾ ಪೆರ್ನಾಂಡಿಸ್ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2011 ಕಲಂ 143, 147,323,354 ಜೊತೆಗೆ 149 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಉಡುಪಿ: ಗೀತಾ ಜಿ ನಾಯಕ್ (42) ಗಂಡ ನಾರಾಯಣ ಜಿ ನಾಯಕ್ ವಾಸ: 21-ಕಾನ್‌ಕರ್ಡ್ ಸಿಲ್ವೇನಿಯ, ಗೋಲ್ಡ್ ಕಾಯೈನ್ ಕ್ಲಬ್ ಬಳಿ, ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಎಂಬವರು ಹಾಗೂ ಅವರ ಗಂಡ ಮೃತ ನಾರಾಯಣ ಜಿ ನಾಯಕ್ (44) ರವರು ಉಡುಪಿಯಲ್ಲಿ ಅವರ ಗಂಡನ ಚಿಕ್ಕಮ್ಮನ ಮಗಳ ಮದುವೆ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ದಿನಾಂಕ: 25/01/2012 ರಂದು ರಾತ್ರಿ 9:00 ಗಂಟೆಗೆ ಸುಗಮ ಟ್ರಾವೆಲ್ಸ್ ನಲ್ಲಿ ಉಡುಪಿಗೆ ಹೊರಟಿದ್ದು. ಮೃತ ನಾರಾಯಣರವರು ಬಸ್‌ನ ಮೇಲ್ಬಾಗದ ಸ್ಲೀಪರ್ ರೆಸ್ಟ್ ನಲ್ಲಿ ಹೋಗಿ ಮಲಗಿದ್ದು, ಗೀತಾ ಜಿ ನಾಯಕ್ ರವರು ಅದರ ಕೆಳಗೆ ರೆಸ್ಟ್‌ನಲ್ಲಿ ಮಲಗಿದ್ದು ದಿನಾಂಕ 26/01/2012 ರಂದು ಬೆಳಿಗ್ಗೆ 07:00 ಗಂಟೆಗೆ ಉಡುಪಿಗೆ ಬಸ್ ಬಂದು ತಲುಪಿದಾಗ ಗೀತಾ ಜಿ ನಾಯಕ್ ರವರು ಅವರ ಗಂಡನನ್ನು ಕರೆದು ಎದ್ದೇಳಲು ಹೇಳಿದಾಗ ಅವರು ಮಾತನಾಡುತ್ತಿರುಲಿಲ್ಲ. ಮೈಮುಟ್ಟಿ ಕರೆದಾಗಲು ಅವರ ಮಾತನಾಡದಿದ್ದಾಗ ಬಸ್‌ನ ಸಿಬ್ಬಂದಿಯವರನ್ನು ಕರೆದು ವಿಷಯ ತಿಳಿಸಿದ್ದು, ಅವರು ಬಂದು ನೋಡಿದಾಗ ಮಾತನಾಡದಿರುವುದಿಂದ ಬಸ್ಸಿನ ಸಿಬ್ಬಂದಿಯವರು ಆದರ್ಶ ಆಸ್ಪತ್ರೆಗೆ ಹೋಗಿ ಅಲ್ಲಿಯ ವೈದ್ಯರನ್ನು ಕರೆದುಕೊಂಡು ಬಂದು ಅವರ ಗಂಡನನ್ನು ಪರೀಕ್ಷೆ ಮಾಡಿಸಿದಾಗ, ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅವರ ಗಂಡನಿಗೆ ರಕ್ತದಲ್ಲಿ ಕೊಲೆಸ್ಟ್ರಾಲ್ ಸ್ವಲ್ಪ ಜಾಸ್ತಿ ಇದ್ದ ಕಾರಣ ಈ ರೋಗಕ್ಕೆ ಮದ್ದನ್ನು ತೆಗೆದುಕೊಳ್ಳುತ್ತಿದ್ದರು. ಈ ಕಾಯಿಲೆ ಇದ್ದುದರಿಂದ ಹೃದಯ ಸಂಬಂದಿ ತೊಂದರೆಯಿಂದಲೇ ಬಸ್ಸಿನಲ್ಲೇ ಮಲಗಿದ್ದಲ್ಲೇ ಮೃತ ಪಟ್ಟಿದ್ದಾಗಿರುತ್ತದೆ ಎಂಬುದಾಗಿ ಗೀತಾ ಜಿ ನಾಯಕ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 01/2012 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment